
ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವವು ದಿನಾಂಕ 14.04.2027 ರಂದು ಜರಗಲಿದ್ದು ಇದರ ಪೂರ್ವಬಾವಿ ಜೀರ್ಣೋದ್ದಾರ ಕೆಲಸದಂಗವಾಗಿ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೂತನ ಗೃಹದ ಶಿಲಾನ್ಯಾಸ ವು ವಾಸ್ತು ಶಿಲ್ಪಿ ಕುಡುಪು ಶ್ರೀ ಕೃಷ್ಣರಾಜ ತಂತ್ರಿವರ್ಯರ ದಿವ್ಯ ಹಸ್ತದಿಂದ ನೆರವೇರಿತ್ತು.

ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರು ಕೆ ಕೃಷ್ಣ ಹೆಬ್ಬಾರ್, ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರು ಶಂಕರ ರೈ ಪಟೇಲ್, ಗೌರವ ಅಧ್ಯಕ್ಷರು ಶ್ರೀಮೋನಪ್ಪ ಶ್ರೀಮಂಜು ಕುಳಾಯಿ, ಅಧ್ಯಕ್ಷರು ಎಮ್ ಜೆ ಶೆಟ್ಟಿ, ಕಾರ್ಯಾಧ್ಯಕ್ಷರು ಸದಾಶಿವ ಎಮ್, ಪ್ರಧಾನ ಕಾರ್ಯದರ್ಶಿ ಯೋಗೀಶ ಸನಿಲ್ ಕುಳಾಯಿ, ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು,ಜನ ಪ್ರತಿನಿಧಿಗಳು, ಸೇವಾಕರ್ತರುಗಳು, ದೇವಸ್ಥಾನದ ಭಕ್ತರು, ವಿವಿಧ ಸಂಘ ಸಂಸ್ಥೆಗಳು ಮತ್ತು ಭಜನಾ ಮಂಡಳಿಗಳ ಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

