ಬೈಂದೂರಿನ ಶತಮಾನದ ಹಿನ್ನೆಲೆ ಇರುವ ಪ್ರಸಿದ್ದ ನಾಕಟ್ಟೆಮನೆ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ

0
29

ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪೇಜಾವರ ಮಠ ಉಡುಪಿ ಸ್ವಾಮೀಜಿಗಳು ನಾಕಟ್ಟೆ ಮನೆ ಹೆಬ್ಬಾಗಿಲು ಉದ್ಘಾಟಿಸಿದರು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದ ಅವರು ಅನೇಕ ಹಿರಿಯ ಮನೆತನಗಳು ಇಂದಿಗೂ ಕರಾವಳಿಯ ಹಿರಿಮೆಯನ್ನು ಜಗದಗಲ ಪಸರಿಸುವಂತೆ ಮಾಡಿದೆ. ತಲೆತಲಾಂತರದಿಂದ ಆ ಕುಟುಂಬಗಳು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಿನ್ನೆಲೆಯ ಕಾರ್ಯಕ್ರಮಗಳು ಮತ್ತು ಮನೆತನದ ಸಾಂಪ್ರದಾಯಗಳು ಇಂದಿಗೂ ಮುಂದುವರಿಸಿಕೊಂಡು ಬಂದಿರುವುದು ಕುಟುಂಬದ ಗೌರವವನ್ನು ಹೆಚ್ಚಿಸುತ್ತಿದೆ.ಹೆಬ್ಬಾಗಿಲು ಮನೆತನದ ಗೌರವ.ಬೈಂದೂರಿನ ನಾಕಟ್ಟೆ ಕುಟುಂಬ ಇಂತಹ ಹಿರಿತನವನ್ನು ಮುಂದುವರಿಸಿರುವುದು ಊರಿಗೆ ಕೀರ್ತಿ ಎಂದರು.

ನಾಕಟ್ಟೆ ಕುಟುಂಬದ ಆನಂದ ಎನ್. ಶೆಟ್ಟಿ ಅವರು ಮಾತನಾಡಿ ನಾಕಟ್ಟೆ ಹೆಬ್ಬಾಗಿಲುಮನೆ ದಾನಧರ್ಮದಲ್ಲಿ ಒಂದು ಕೈ ಮೇಲು ಎನ್ನುವಷ್ಟು ಪ್ರಸಿದ್ಧವಾಗಿತ್ತು. ಹಲವಾರು ವರ್ಷಗಳ ಹಿಂದೆ ಶಿರಸಿ, ಕುಂದಾಪುರ, ಉಡುಪಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಇದು ಆಶ್ರಯವಾಗಿತ್ತು.ರಾತ್ರಿ ವೇಳೆ ಬಸ್ಸಿನ ವ್ಯವಸ್ಥೆ ಇಲ್ಲದ ಕಾಲದಲ್ಲಿ ಪ್ರಯಾಣಿಕರಿಗೆ ಊಟ ಮತ್ತು ವಸತಿ ನೀಡುತ್ತಿದ್ದ ಮಾನವೀಯ ಮನೆ ಇದಾಗಿತ್ತು.
ಅನೇಕ ಜನರ ಜೀವನದಲ್ಲಿ ಈ ಮನೆ ಮರೆಯಲಾಗದ ನೆನಪುಗಳನ್ನು ಮೂಡಿಸಿದೆ. ಇಂದು ಮತ್ತೆ ಆ ಹಳೆಯ ಸುವರ್ಣ ಕ್ಷಣಗಳನ್ನು ನೆನಪಿಸುವಂತೆ ಈ ಮನೆ ಪುನರ್ಜನ್ಮ ಪಡೆದಿದೆ. ನಿನ್ನೆ ಅದ್ದೂರಿಯಾಗಿ ಉದ್ಘಾಟನೆಯಾಗಿ ಹೆಬ್ಬಾಗಿಲು ಸಂಭ್ರಮ ಎಲ್ಲರ ಹೃದಯವನ್ನು ಹರ್ಷಗೊಳಿಸಿದೆ ಎಂದರು.

ಈ ಸಂದರ್ಭದಲ್ಲಿ CA ಪರೀಕ್ಷೆಯಲ್ಲಿ ಉತ್ತೀರ್ಣರಾದ ನಾಕಟ್ಟೆ ಕುಟುಂಬದ ನೂತನ ಆನಂದ ಶೆಟ್ಟಿಯವರ ಮಗ ಮಂದಾರ ಎ.ಶೆಟ್ಟಿ ಯವರನ್ನು ಸ್ವಾಮೀಜಿಯವರು ಮುಖ್ಯ ಅತಿಥಿಗಳಾಗಿ ವತ್ತಿನಣೆ ರಾಘವೇಂದ್ರ ಸ್ವಾಮಿ ಮಠದ (ಕಿರುಮಂತ್ರಾಲಯ) ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಬೈಂದೂರು ಯಡ್ತರೆಯ ಕೋಟಿ ಚೆನ್ನಯ್ಯ ಗರಡಿಯ ಅಧ್ಯಕ್ಷ ಎಸ್.ರಾಜು ಪೂಜಾರಿ, ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಾಕಟ್ಟೆ, ಬೈಂದೂರು ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ನಾಗರಾಜ ಶೆಟ್ಟಿ ನಾಕಟ್ಟೆ, ಸಿಂಡಿಕೇಟ್‌ ಬ್ಯಾಂಕಿನ ನಿವೃತ್ತ ಅಧಿಕಾರಿ ಸುಧಾಕರ ಶೆಟ್ಟಿ ಇಂದ್ರಾಳಿ, ಡಿಯ‌ರ್ ಕನ್ಸಕ್ಷನ್ ಹುಬ್ಬಳ್ಳಿ ಕೆ ಆರ್ ಶೆಟ್ಟಿ, ಆರ್.ಎನ್.ಶೆಟ್ಟಿ ಕಂಪನಿ ಹುಬ್ಬಳ್ಳಿ ನಿರ್ದೇಶಕ ಕೆ.ಆನಂದ ಶೆಟ್ಟಿ, ನಾಕಟ್ಟೆ ಹೆಬ್ಬಾಗಿಲು ಮನೆ ಕುಟುಂಬದ ಪ್ರಮುಖರಾದ ರಘುರಾಮ ಶೆಟ್ಟಿ, ದುಗ್ಗಪ್ಪ ಶೆಟ್ಟಿ, ಆನಂದ ಶೆಟ್ಟಿ,ಗೋಪಾಲ ಶೆಟ್ಟಿ, ಗಿರಿಜಾ ಶೆಟ್ಟಿ, ನಾಗಮ್ಮ ಶೆಟ್ಟಿ ಹಾಗೂ ನಾಕಟ್ಟೆಮನೆಯ ಕುಟುಂಬಸ್ಥರು ಉಪಸ್ಥಿತರಿದ್ದರು.

ನಾಗರಾಜ್ ಎನ್.ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಸುಧಾಕರ್ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ಪ್ರದೀಪ್ ಕುಮಾ‌ರ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here