ರಾತ್ರಿಯ ಬಿರುಗಾಳಿಗೆ ಪತ್ರಕರ್ತ ಜಗದೀಶ್ ಪೂಜಾರಿ ಮನೆಯ ಮೇಲ್ಛಾವಣಿ ಜಖಂ..! ಕಡಂದಲೆ ಪೂಪಾಡಿಕಲ್ಲಿನಲ್ಲಿ ಘಟನೆ..!

0
18

ಮೂಡುಬಿದಿರೆ : ಕಳೆದ ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲಿನ ಪತ್ರಕರ್ತ ಜಗದೀಶ್ ಪೂಜಾರಿ ಅವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದು ಮನೆಯು ಹಾನಿಗೊಳಗಾಗಿದೆ.

ರಾತ್ರಿ ಸುರಿದ ಭಾರೀ ಗಾಳಿ ಮತ್ತು ಮಳೆಯ ತೀವ್ರತೆಗೆ ಮನೆಯ ಸಮೀಪದಲ್ಲಿದ್ದ ಮರವೊಂದು ಉರುಳಿ ಮನೆಯ ಮೇಲ್ಛಾವಣಿಯ ಮೇಲೆ ಬಿದ್ದ ಪರಿಣಾಮ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಘಟನೆಯಿಂದ ಮನೆಯ ಮೇಲ್ಛಾವಣಿ ಹಾಗೂ ಕೆಲವು ಭಾಗಗಳಿಗೆ ಹಾನಿಯಾಗಿದೆ. ಸಧ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ . ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here