ತುಳು ಅಕಾಡೆಮಿಯಲ್ಲಿ : ಎಸ್. ಜಾನಕಿ ,  ನಿರಂಜನರ ರೈ,  ಪರಮಾನಂದ ಸಾಲ್ಯಾನ್   ಅವರಿಗೆ ನುಡಿ ನಮನ

0
4

ಮಂಗಳೂರು :  ಖ್ಯಾತ ಗಾಯಕಿ ಎಸ್ .ಜಾನಕಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ನಿರಂಜನರ ರೈ ಮಠಂತಬೆಟ್ಟು, ರಂಗಕರ್ಮಿ ಪರಮಾನಂದ ಸಾಲ್ಯಾನ್ ಅವರಿಗೆ  ನುಡಿ ನಮನ ಹಾಗೂ  ಶ್ರದ್ಧಾಂಜಲಿ ಅರ್ಪಿಸುವ  ಕಾರ್ಯಕ್ರಮ ತುಳು ಭವನದಲ್ಲಿ ನಡೆಯಿತು.

ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಮಾತನಾಡಿ, ಎಸ್ .ಜಾನಕಿ ಅವರು ತುಳು ಸಿನಿಮಾ ರಂಗ ಆರಂಭಗೊಂಡ 70ರ ದಶಕದ ಕಾಲಘಟ್ಟದಲ್ಲಿ ಅನೇಕ ತುಳು ಸಿನಿಮಾಗಳಲ್ಲಿ ಹಾಡುವ ಮೂಲಕ ತುಳು ಸಿನಿಮಾದ ಖ್ಯಾತಿಗೆ ಕಾರಣಕರ್ತರಾಗಿದ್ದರು ಎಂದು ನೆನಪಿಸಿದರು.

ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಅವರು ಮಾತನಾಡಿ, ನಿರಂಜನ ರೈ ಅವರು,  ಸಾಮಾಜಿಕ, ಧಾರ್ಮಿಕ ರಾಜಕೀಯ, ಕಲಾ ಕ್ಷೇತ್ರದಲ್ಲಿ ತನ್ನ ಸಣ್ಣ ವಯಸ್ಸಿನಲ್ಲಿಯೇ ಅನನ್ಯ ಸೇವೆ ಸಲ್ಲಿಸಿದವರು ಎಂದು ಬಣ್ಣಿಸಿದರು.‌

ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಅವರು ಮಾತನಾಡಿ, ರಂಗಕರ್ಮಿ  ಪರಮಾನಂದ ಸಾಲಿಯಾನ್ ಅವರು ತನ್ನ ಊರು ಸಸಿಹಿತ್ಲು ಪ್ರದೇಶದಲ್ಲಿ ಅನೇಕ ಯುವ ಕಲಾವಿದರು ಹಾಗೂ ನಾಟಕಕಾರರು ಬೆಳೆಯಲು ಪ್ರೇರಣೆಯಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್,  ತುಳು ಅಕಾಡೆಮಿ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ಅಕಾಡೆಮಿಯ ಮಾಜಿ ಸದಸ್ಯ ಚಿದಂಬರ ಬೈಕಂಪಾಡಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪ್ರಾಂಶುಪಾಲೆ ಡಾ. ಜ್ಯೋತಿ ಚೇಳಾರ್, ಲೇಖಕ ಚಂದ್ರಹಾಸ ಕಣಂತೂರು, ನಾಟಕ ನಿರ್ದೇಶಕ ಜಗನ್ ಪವಾರ್ ಬೇಕಲ್ ,ಲೇಖಕಿ ಅಕ್ಷತಾ ರಾಜ್ ಪೆರ್ಲ , ದೇವಿಕಾ ನಾಗೇಶ್ ,  ತುಳು ಪರಿಷತ್ ಅಧ್ಯಕ್ಷ ಶುಭೋಧಯ ಆಳ್ವ , ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ಕಿರಣ್ ಕುಮಾರ್,ಶೋಭೇಂದ್ರ ಸಸಿಹಿತ್ಲು, ಧನಂಜಯ ಮೂಡುಬಿದರೆ, ಎಡ್ವರ್ಡ್ ಲೋಬೋ, ಬಾಬು ಪಿಲಾರ್ , ಸುಂದರ ಬೆಳುವಾಯಿ, ಸುಧಾ ನಾಗೇಶ್ ಮೊದಲಾದವರು,  ಉಪಸ್ಥಿತರಿದ್ದರು