ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 8ನೇ ಸ್ಥಾನ ಪಡೆದ ಶ್ರೀ ವಿದ್ಯಾ ಜೆಡ್ಡು ರವರಿಗೆ ಗೌರವಾರ್ಪಣೆ ಸನ್ಮಾನ

0
26

ಪೆರ್ನಾಜೆ : ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದ ಬಂಟ್ವಾಳ ತಾಲೂಕಿನ ಬಸವನಗುಡಿಯ ನಿವಾಸಿಯವರಿಗೆ ಶ್ರೀ ಗೋಪಾಲಕೃಷ್ಣ ಸಭಾಭವನ ಮುಡಿಪಿನಲ್ಲಿ ಪಟಿಕ್ಕಲ್ ಕೃಷ್ಣಪಸಾದ ಅವರ ಮಗ ಚಿನ್ಮಯ ರಾಮ ಅವನ ಉಪನಯನ ಸಂದರ್ಭದಲ್ಲಿ ಶ್ರೀ ವಿದ್ಯಾ ಜೆಡ್ಡು ಗಳಿಸಿದ್ದು ಅಲ್ಲದೆ ಇವಳು ಸ್ವರ ಸಿಂಚನ ಸಂಗೀತ ಕಲಾ ವಿದ್ಯಾರ್ಥಿ ಭರತನಾಟ್ಯ ಬಹುಮುಖ ಕಲಾ ಪ್ರತಿಭೆ ವಿದ್ಯಾರ್ಥಿಯಾಗಿದ್ದು ಇವರಿಗೆ ಗೌರವಾರ್ಪಣೆ ಕಾರ್ಯಕ್ರಮವು ಮೇ 11 ರಂದು ನಡೆಯಿತು.

ವಿದ್ಯಾರ್ಥಿನಿಯ ಅಜ್ಜ ಅಜ್ಜಿ ಪಟಿಕ್ಕಲ್ ರಾಮಚಂದ್ರ ಭಟ್ ಮತ್ತು ದೇವಕಿ ಅವರು ಶಾಲು ಪೇಟ ತೊಡಿಸಿದರು.ಶಾರದಮ್ಮ ಪೆರ್ನಾಜೆ ಹಾರ ಹಾಕಿದರು , ಗೌರಿ ಅಮ್ಮ ಜೆಡ್ಡು ಪುಸ್ತಕವಾಗಿ. ಸ್ಮರಣಿ ಕ್ಕೆಯನ್ನು ಇತ್ತರು. ಕುಮಾರ ಪೆರ್ನಾಜೆ ಯವರ ಪರಿಕಲ್ಪನೆಯಲ್ಲಿ ನಡೆದ ವಿಶೇಷ ಸಾಧನ ಸನ್ಮಾನದಲ್ಲಿ ಜೇನುತುಪ್ಪವನ್ನು ನೀಡಿ ಶುಭ ಹಾರೈಸಿದರು.

ಸೌಮ್ಯ ಪೆರ್ನಾಜೆ ತಾಂಬೂಲವನ್ನು ನೀಡಿದರು. ವಿದ್ಯಾರ್ಥಿನಿಯ ತಂದೆ ತಾಯಿ ನ್ಯಾಯವಾದಿ ಪ್ರಕಾಶ್ ನಾರಾಯಣ ಜೆಡ್ಡು ,ರಮ್ಯ ಜೆಡ್ಡು ಕೃಷ್ಣಪ್ರಸಾದ್ ಪಟಿಕ್ಕಲ್, ಸ್ವರ್ಣ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅದೇ ದಿನ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರಿಂದ ಯಕ್ಷಗಾನ ವೈಭವ ನಡೆಯಿತು ಎಲ್ಲರ ಮನ ರಂಜಿಸಿದರು.

LEAVE A REPLY

Please enter your comment!
Please enter your name here