ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು,ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು(ರಿ)ಪುತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು (ರಿ) ಪುತ್ತೂರು ಘಟಕ, ಶ್ರೀ ಕೃಷ್ಣ ಯುವಕ ಮಂಡಲ (ರಿ)ಸಿಟಿಗುಡ್ಡೆ ಪುತ್ತೂರು ವತಿಯಿಂದ ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ದಿನಾಂಕ.01..09..2026ರಂದು ಬಹುಮುಖ ಪ್ರತಿಭೆಯ ಶ್ರೀ ಜಯಾನಂದ ಪೆರಾಜೆ ಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜಯಾನಂದ ಪೆರಾಜೆ ಯವರು ಶಿಕ್ಷಕರಾಗಿ, ಪತ್ರಕರ್ತ ರಾಗಿ,ಕಲಾವಿದರಾಗಿ, ಸಾಹಿತ್ಯ ಸಂಘಟಕರಾಗಿ, ಸಾಹಿತಿ ಯಾಗಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ.ವೇದಿಕೆಯಲ್ಲಿ ಪ್ರತಿಷ್ಠಿತ ಸುವರ್ಣ ಕನ್ನಡಿಗ 2026ಪ್ರಶಸ್ತಿ ಪುರಸ್ಕ್ರತ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಉಮೇಶ್ ನಾಯಕ್ ,
ಶ್ರೀವಾಸು ನಾಯ್ಕ ನಿಸರ್ಗ ಗಣೀಶ್ ಭಾಗ್ ನೆಹರೂ ನಗರ ಪುತ್ತೂರು, ಮುಖ್ಯ ಅತಿಥಿಗಳಾಗಿದ್ದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕ ದ ಅಧ್ಯಕ್ಷೆ ನಾಡೋಜ ಡಾ.ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಡಾ.ಶಾಂತಾ ಪುತ್ತೂರು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನ ಸಮಾಜ ಸೇವಕ ನವೀನ್ ಸಿಟಿಗುಡ್ಡೆ ಪುತ್ತೂರು, ಕಿರುತೆರೆ ನಟ ಕಲಾವಿದ ಕೃಷ್ಣಪ್ಪ, ಅಣ್ಣಪ್ಪ ,ಜ್ಯೋತಿ ದಂಪತಿಗಳು,ಕಬಕ ಎಸ್.ಡಿ.ಎಂ.ಸಿ.ಸದಸ್ಯರಾದ ಪ್ರಮೀಳಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೆಟ್ಲದ ಈಶ್ವರ ಕುಲಾಲ್ ನಳಿನಾಕ್ಷಿ ದಂಪತಿಗಳ ಪುತ್ರಿ ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿ ಕಾರುಣ್ಯ ಳ ಹುಟ್ಟುಹಬ್ಬ ಆಚರಿಸಲಾಯಿತು.

