ತೆಂಕುಪೇಟೆ ಬೊಬ್ಬರ್ಯ ದೈವಸ್ಥಾನದಲ್ಲಿ ಜೂನ್ 7ರಂದು ಸಾಧಕರಿಗೆ ಗೌರವ ಸನ್ಮಾನ

0
63

ಉಡುಪಿ:: ತೆಂಕುಪೇಟೆಯ ವುಡ್‌ಲ್ಯಾಂಡ್ಸ್ ಹೋಟೆಲ್ ಸಮೀಪದ ಬೊಬ್ಬರ್ಯ, ಕಾಂತೇರಿ, ಜುಮಾದಿ, ಕಲ್ಕುಡ ಹಾಗೂ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ಜೂನ್ 5ರಿಂದ 7ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನೇಮೋತ್ಸವದ ಅಂಗವಾಗಿ ಜೂನ್ 7ರಂದು ಸಂಜೆ 5 ಗಂಟೆಗೆ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು.

ಸನ್ಮಾನಕ್ಕೆ ಆಯ್ಕೆಯಾದವರಲ್ಲಿ ನಿಟ್ಟೂರು ಮಹಾಬಲ ಶೆಟ್ಟಿ (ದೈವರಾಧನೆ ಕ್ಷೇತ್ರ – ಮದಿಪು), ಕೃಷ್ಣ ಪೂಜಾರಿ ಅಂಜಾರು (ಕೊಂಬು ವಾದನ ಹಾಗೂ ಸಮಾಜಸೇವೆ), ಉದಯ ಮೆಂಡನ್ (ಬ್ಯಾಂಡ್ ವಾದನ ಹಾಗೂ ದೈವರಾಧನೆ), ಶಕುಂತಲಾ ಸುಕೇಶ್ (ಸಮಾಜಸೇವೆ), ಆಶಾ ಚಂದ್ರಶೇಖರ್ (ಕ್ರೀಡಾ ಕ್ಷೇತ್ರ), ಸುಕನ್ಯಾ ಶೆಟ್ಟಿ (ಸಮಾಜಸೇವೆ), ಶ್ಯಾಮ ಪಾಣ್ಣಾರ್ (ದೈವ ನರ್ತಕರು – ದೈವರಾಧನೆ), ಸುಂದರ ಪೂಜಾರಿ ಅಂಜಾರು (ಗರಡಿ ಅರ್ಚಕರು – ದೈವರಾಧನೆ) ಹಾಗೂ ಕೃಷ್ಣ ಮಡಿವಾಳ (ದೈವರಾಧನೆ ಕ್ಷೇತ್ರ) ಸೇರಿದ್ದಾರೆ.

ಗೌರವಾನ್ವಿತ ಅತಿಥಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಾಧಕರ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಿ ಗೌರವಿಸಲಾಗುವುದು.

ಈ ವಿಷಯವನ್ನು ದೈವಸ್ಥಾನದ ಶೆಟ್ಟಿ ಬಾಲೆ ಹಾಗೂ ಬೊಬ್ಬರ್ಯ ಸೇವಾ ಸಮಿತಿಯ ಗೌರವಾಧ್ಯಕ್ಷ ವಿನೋದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here