ಕಣಿಯೂರು ಗ್ರಾಮ ಪಂಚಾಯತ್ ಸದಸ್ಯಗೆ ಹಲ್ಲೆ ಪ್ರಕರಣ

0
36

ಆರೋಪಿಗಳಾದ ತಿಮರೊಡಿ ಗ್ಯಾಂಗ್ ಸದಸ್ಯರಾದ ಪ್ರಜ್ವಲ್ ಕೆ.ವಿ. ಗೌಡ ಕಲ್ಮoಜ, ರಾಧಾಕೃಷ್ಣ ಬರಮೇಲು ಕಣಿಯೂರು ಇವರಿಗೆ ಜೈಲು ಶಿಕ್ಷೆ ಪ್ರಕಟ

ಕಳೆದ ಜುಲೈ 28- 2024 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರಿನಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಪ್ರವೀಣ್ ಗೌಡ ಅವರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಸಹಚರರಾದ ಕಿರಣ್ ಶಿಶಿಲ, ಪ್ರಜ್ವಲ್ ಕೆವಿ ಗೌಡ, ಕಲ್ಮoಜ ಮತ್ತು ರಾಧಾಕೃಷ್ಣ ಗೌಡ ಬರಮೇಲು, ಕಣಿಯೂರು ಇವರು ಪ್ರವೀಣ್ ರವರ ಅಂಗಡಿ ಗೆ ಪ್ರವೇಶಿಸಿ ” ನೀನು ಮಹೇಶಣ್ಣ ನ ಬಗ್ಗೆ ಬಾರಿ ಮಾತನಾಡುತ್ತೀಯ ” ನೀನು ಪಂಚಾಯತ್ ಮೆಂಬರ್ ಎಂದು ಹಾರಾಡಬೇಡ ಎಂದು ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದರು.

ಹಳ್ಳೆಗೊಳಗಾದ ಪ್ರವೀಣ್ ರವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಉಪ್ಪಿನಂಗಡಿ ಪೋಲೀಸರು ಪ್ರವೀಣ್ ರವರ ಹೇಳಿಕೆಯ ಪ್ರಕಾರ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಪ್ರಕರಣ ದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಎ 1 ಕಿರಣ್ ಶಿಶಿಲ ಪ್ರಕರಣ ದ ವಿಚಾರಣೆ ಗೆ ಸರಿಯಾಗಿ ಹಾಜರಾಗದ ಕಾರಣ ಆತನ ವಿರುದ್ಧ ಪ್ರತ್ಯೇಕ ವಿಭಜಿತ ಪ್ರಕರಣ ದಾಖಲಿಸಿ, ಉಳಿದ ಆರೋಪಿಗಳಾದ ಪ್ರಜ್ವಲ್ ಕೆವಿ ಗೌಡ ಮತ್ತು ರಾಧಾಕೃಷ್ಣ ಗೌಡ ಬರಮೇಲು ಅವರ ಮೇಲಿನ ಪ್ರಕರಣ ದ ವಿಚಾರಣೆಯನ್ನು ಕೈಗೊಂಡು ದಿನಾಂಕ 02.06.2026 ರಂದು ಅಂತಿಮ ಆದೇಶ ಮಾಡಿದೆ..

ಆದೇಶ ದ ಪ್ರಕಾರ ಪ್ರಜ್ವಲ್ ಕೆ. ವಿ ಗೌಡ ಹಾಗೂ ರಾಧಾಕೃಷ್ಣ ಗೆ ತಲಾ 6 ತಿಂಗಳ ಜೈಲು ಶಿಕ್ಷೆ ಮತ್ತು ರೂ 5,000 ದಂಡ ವಿಧಿಸಿ ಆದೇಶಿಸಿದೆ

ಅಭಿಯೋಜನೆಯ ಪರವಾಗಿ ಎ ಪಿ ಪಿ ದಿವ್ಯರಾಜ್ ವಾದಿಸಿದ್ದರು.

LEAVE A REPLY

Please enter your comment!
Please enter your name here