ಬಂಟರ ಸಂಘ ಪೂರ್ವ ಆಫ್ರಿಕಾ, ನೈರೋಬಿ (ಕೀನ್ಯಾ) ಇದರ ವತಿಯಿಂದ ದಿನಾಂಕ 19-04-2026 ರಂದು ನೈರೋಬಿ ವೆಸ್ಟ್ ಲ್ಯಾಂಡ್ ಚೌಪಾಟಿ ಹೋಟೆಲ್‌ನ ಸಭಾಭವನದಲ್ಲಿ ತುಳುವರ ಬಿಸು ಪರ್ಬದ ಆಚರಣೆ ಬಹಳ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ದೇವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು. ಪ್ರಾರ್ಥನೆಯನ್ನು ಉಷಾ ಪ್ರದೀಪ್ ಶೆಟ್ಟಿ ಮತ್ತು ಶಿವರಂಜನ್ ಶೆಟ್ಟಿ ನೆರವೇರಿಸಿದರು. ಭಾಸ್ಕರ್ ಶೆಟ್ಟಿ, ರವಿ ಶೆಟ್ಟಿ, ಸುರೇಶ್ ಶೆಟ್ಟಿ, ನವೀನ್ ಶೆಟ್ಟಿ ಹಾಗೂ ನಿತಿನ್ ಶೆಟ್ಟಿ ದೀಪ ಬೆಳಗಿಸಿದರು.
ಸಂಘದ ಅಧ್ಯಕ್ಷರಾದ ಯಶವಂತ್ ಶೆಟ್ಟಿ ಸ್ವಾಗತ ಭಾಷಣ ಮಾಡಿದರು. ಬಿಸು ಆಚರಣೆಯ ಮಹತ್ವವನ್ನು ಸಂಘದ ಉಪಾಧ್ಯಕ್ಷರಾದ ಸಂದೀಪ್ ಸಾಮಾನಿ ಅವರು ವಿವರಿಸಿದರು.
ಸಂಘದ ಪುಟಾಣಿ ಮಕ್ಕಳಿಂದ ನೃತ್ಯ, ಪ್ರಹಸನ ಹಾಗೂ ಮಹಿಳಾ ಸದಸ್ಯರಿಂದ ನೃತ್ಯ ಕಾರ್ಯಕ್ರಮಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷಯ ರಾಜೇಶ್ ಶೆಟ್ಟಿ ಮತ್ತು ದೀಕ್ಷಾ ರಾಮ್ ಶೆಟ್ಟಿ ಅವರು ಸಂಯೋಜಿಸಿದರು. ಕಾರ್ಯದರ್ಶಿ ದೀಪಕ್ ಶೆಟ್ಟಿ ಮತ್ತು ಶಿಲ್ಪ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.
ಕೊನೆಯಲ್ಲಿ ಪ್ರದೀಪ್ ಶೆಟ್ಟಿ ಧನ್ಯವಾದಗಳನ್ನು ಸಮರ್ಪಿಸಿದರು. ತುಳುನಾಡಿನ ವಿಶೇಷ ಭೋಜನದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.

