ಉಪ್ಪಿನಂಗಡಿಯಲ್ಲಿ ಯೂಟ್ಯೂಬ್ ತುಳು ಭಕ್ತಿಗೀತೆ ಲೋಕಾರ್ಪಣೆ

0
29

ಉಪ್ಪಿನಂಗಡಿ : ಸಿ.ಪಿ.ಕ್ರಿಯೆಷನ್ಸ್ ಉಬಾರ್ ಅರ್ಪಿಸಿದ, ವಿದ್ಯಾಪ್ರದೀಪ್ ಮಡಲ ಮತ್ತು ಜಗದೀಶ್ ಬುಡೋಳಿ ನಿರ್ಮಿಸಿದ ಹರೀಶ್ ಮಂಜೊಟ್ಟಿ ಸಾಹಿತ್ಯ ಬರೆದು ಚಿದು ಪಾಂಗಲ್ಪಾಡಿ ಹಾಡಿರುವ ಮಹಮ್ಮಾಯಿಯ ಮಹಿಮೆ ಸಾರುವ ತುಳು ಭಕ್ತಿಗೀತೆ ‘ಕಾರ್ಣಿಕೊದ ಮಮ್ಮಾಯಿ’ ಇತ್ತೀಚೆಗೆ ಉಪ್ಪಿನಂಗಡಿಯ ಮಹಾಕಾಳಿ ದೇಗುಲದಲ್ಲಿ ಬಿಡುಗಡೆಯಾಯಿತು.

ಉಪ್ಪಿನಂಗಡಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನೈಕ್ ಭಕ್ತಿಗೀತೆಯ ಪೋಸ್ಟರ್ ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಚಂದಪ್ಪ ನಾಯ್ಕ್ ಅಡ್ಕರೆಕೋಡಿ, ಗಂಗಾಧರ ಗೌಡ ಅಲುಂಬುಡ, ಗಣೇಶ್ ಬಟ್ರಬೆಟ್ಟು, ಶೋಭಿತ್ ಮಂಜೊಟ್ಟಿ ಇನ್ನಿತರರು ಉಪಸ್ಥಿತರಿದ್ದರು.