ತುಳು ಹಾರರ್ ಕಾಮಿಡಿ ಡ್ರಾಮಾ ‘ಒಂಜಿ ಗುಜ್ಜೆದ ಕಥೆ’ ಶೀಘ್ರದಲ್ಲೇ ಬಿಡುಗಡೆ

0
41

ಕಾರ್ಕಳ : ಹೊಸ ತುಳು ಹಾರರ್ ಕಾಮಿಡಿ ಡ್ರಾಮಾ ‘ಒಂಜಿ ಗುಜ್ಜೆದ ಕಥೆ’ (Every Truth Has a Story) ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ರಾಜ್ಯ ಪ್ರಶಸ್ತಿ ವಿಜೇತ ಸಿಂಧೂರ ಕಲಾವಿದೆರ್ ಕಾರ್ಲ ಅಭಿನಯದಲ್ಲಿ ಮೂಡಿಬಂದಿರುವ ಈ ನಾಟಕಕ್ಕೆ ವಿಜಯ ಶೆಟ್ಟಿ ಕಾರ್ಕಳ ಸಾರಥ್ಯ ವಹಿಸಿದ್ದಾರೆ. ನಾಟಕದ ಕಥೆಯನ್ನು ಪವನ್ ಕಾರ್ಲ ಬರೆದಿದ್ದು, ಸಂದೀಪ್ ಬಾರಾಡಿ ನಿರ್ದೇಶನ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಕುಸಲ್ದ ಬೊಳ್ಳಿ ಅನಿಲ್ ಕಾಬೆಟ್ಟು ಕಾರ್ಯನಿರ್ವಹಿಸಿರುತ್ತಾರೆ.

ನಾಟಕಕ್ಕೆ ಸದಾನಂದ ಬೆಳುವಾಯಿ ಸಂಗೀತ ನೀಡಿದ್ದು, ರವೀಂದ್ರ ಶಾಂತಿ ಪುಲ್ಕೇರಿ, ಸುಧಾಕರ್ ಪೂಜಾರಿ ಪುಣೆ , ಹಮೀದ್ ಮಿಯ್ಯಾರು ಹಾಗೂ ಅಶೋಕ್ ಪೊಸಲಾಯಿ ನಿರ್ಮಾಣ ನಿರ್ವಹಣೆಯಲ್ಲಿ ಸಹಕಾರ ನೀಡಿದ್ದಾರೆ.

ನಾಟಕದಲ್ಲಿ ರಂಗಚತುರೆ ಲೀಲಾವತಿ ಪೊಸಲಾಯಿ, ರವೀಂದ್ರ ಶಾಂತಿ ಪುಲ್ಕೇರಿ, ಅನಿಲ್ ಕಾಬೆಟ್ಟು, ತಾರನಾಥ್ ಬೋಳ, ಹಮೀದ್ ಮಿಯ್ಯಾರು,ಸಂದೀಪ್‌ ಬಾರಾಡಿ, ರಾಜೇಶ್ ದಾನಶಾಲೆ,ವಿಠಲ್ ಅಮೀನ್ ಪುಕ್ಕೇರಿ, ಪ್ರಮೀತ್ ಸಾಣೂರು, ಪವನ್ ಕಾರ್ಲ, ಹರ್ಷ ಯಾದವ್, ಹೇಮಂತ್ ಗುಂಡಾಜೆ, ಸುಚಿತ್ರಾ ಹಾಗೂ ರಕ್ಷಿಕಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ನಾಟಕದ ಧ್ವನಿ ಮತ್ತು ಬೆಳಕಿನ ಜವಾಬ್ದಾರಿಯನ್ನು ಶ್ರೀ ದುರ್ಗಾ ಸೌಂಡ್ಸ್, ತೆಳ್ಳಾರು ವಹಿಸಿಕೊಂಡಿದ್ದು, ಪ್ರಚಾರ ಮತ್ತು ಮಾರ್ಕೆಟಿಂಗ್‌ನ್ನು ಅಜಿತ್ ಶಿರ್ಲಾಲ್ ನಿರ್ವಹಿಸಿರುತ್ತಾರೆ.

ಪ್ರದರ್ಶನಗಳಿಗಾಗಿ ಸಂಪರ್ಕಿಸಿ : 9901391580 , 8105879287

ವರದಿ : ಪ್ರಶಾಂತ್ ಜೋಡುಕಟ್ಟೆ

LEAVE A REPLY

Please enter your comment!
Please enter your name here