ತುಳುಕೂಟ ಇಸ್ರೇಲ್ ವತಿಯಿಂದ ಅಶಕ್ತರಿಗೆ ತಲಾ ₹10 ಸಾವಿರ ಆರ್ಥಿಕ ನೆರವು

0
52

ತುಳುಕೂಟ ಇಸ್ರೇಲ್ ಇದರ ವತಿಯಿಂದ ಅಳದಂಗಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಶಕ್ತ(ಅನಾರೋಗ್ಯದಿಂದ ಬಳಲುತ್ತಿರುವ)ರಿಗೆ ತಲಾ 10,000 ರೂ.ಗಳಂತೆ ಆರ್ಥಿಕ ನೆರವನ್ನು ದಿನಾಂಕ 16.07.2026ರಂದು ಅಳದಂಗಡಿ ಶ್ರೀ ಸತ್ಯದೇವತಾ ಧೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರವರು ಹಸ್ತಾಂತರಿಸಿದರು.

ಈ ಸಂದರ್ಭ ಸತ್ಯದೇವತಾ ಕಲಾತಂಡದ ಪೂರ್ವಾಧ್ಯಕ್ಷರಾದ ಸುಂದರ ಪೂಜಾರಿ ನೀರಲ್ಕೆ,ಶ್ರೀಮತಿ ಚೇತನಾ ಸಂದೀಪ್,ಟೀಂ ಅಭಯಹಸ್ತ ಚ್ಯಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಆನಂದ ಪೂಜಾರಿ ನೀರಲ್ಕೆ, ಅಭಿಷೇಕ್ ಪೂಜಾರಿ ನೀರಲ್ಕೆ,ಪ್ರಧಾನ ಕಾರ್ಯದರ್ಶಿ ರಕ್ಷಿತ್ ಎಬಿ ರವರು ಉಪಸ್ಥಿತರಿದ್ದರು.