ಉಡುಪಿ : ಶೀರೂರು ಮಠದ ಪರ್ಯಾಯ ಮಹೋತ್ಸವಕ್ಕೆ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮ

0
71

ಉಡುಪಿ : ಅಖಿಲ ಭಾರತ ದೈವರಾದಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ಜಿಲ್ಲೆ ಮತ್ತು ಬೊಬ್ಬರ್ಯ ಸೇವಾ ಸಮಿತಿ ಉಡುಪಿ ತೆಂಕುಪೇಟೆ ಸದಸ್ಯರು ಈ ಬಾರಿಯ ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿತರಿಸಿದ್ದಾರೆ. ಉಡುಪಿಯ ದೈವಸ್ಥಾನ, ದೇವಸ್ಥಾನ ಸಂಘ ಸಂಸ್ಥೆ ಉದ್ಯಮಿಗಳು ಮತ್ತು ಸಂಬಂಧಪಟ್ಟ ಗ್ರಾಮ ಮುಖ್ಯಸ್ಥರ ಮನೆಗೆ ಪತ್ರಿಕೆಗಳು ತಲುಪಿಸಬಹುದಾಗಿ ಕಾರ್ಯಕ್ರಮದ ವೇಳೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಬೊಬ್ಬರ್ಯ ಸೇವಾ ಸಮಿತಿಯ ಸ್ಥಾಪಕ ಗೌರವ ಅಧ್ಯಕ್ಷ ಹಾಗೂ ಒಕ್ಕೂಟದ ಸ್ಥಾಪಕ ಅಧ್ಯಕ್ಷ ವಿನೋದ್ ಶೆಟ್ಟಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಸಂಘಟನೆ ಕಾರ್ಯದರ್ಶಿ ಭವಿಷ್ ಸಮಿತ ಶೆಟ್ಟಿ, ವಾಸು ದೇವಾಡಿಗ, ಗೋಪಾಲ ವಿಜಯ ಪೂಜಾರಿ, ಮಹಿಳಾ ಸಮಿತಿಯ ಸಂಚಾಲಕರಾದ ಪ್ರೀತಿ ಕಲ್ಯಾಣಪುರ ಸೇರಿದಂತೆ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಸ್ಥಳೀಯ ದೈವಸ್ಥಾನ ಮತ್ತು ಸಮಾಜ ಸೇವಾ ಸಂಘಟನೆಗಳ ನಡುವಿನ ಜವಾಬ್ದಾರಿಯುತ ಸಹಕಾರವನ್ನು ಒತ್ತಿ ತೋರಿಸುವಂತೆ ಆಯೋಜಿಸಲಾಯಿತು. ಸದಸ್ಯರು ಶೀರೂರು ಮಠದ ಮಹೋತ್ಸವದಲ್ಲಿ ಭಾಗವಹಿಸುವಂತೆ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.

LEAVE A REPLY

Please enter your comment!
Please enter your name here