ಉಡುಪಿ : ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಹಾಗೂ ಕೊರಗಜ್ಜ ದೈವಸ್ಥಾನ ಬೊಬ್ಬರ್ಯ ಕಟ್ಟೆ ಉಡುಪಿ ವುಡ್ ಲ್ಯಾಂಡ್ಸ್ ಹೋಟೆಲ್ ಹತ್ತಿರ ಉಡುಪಿ ಜಿಲ್ಲೆ ದಿನಾಂಕ 10-02-2026 ನೇ ಮಂಗಳವಾರ ಮಕರ ತಿಂಗಳ ಮಾರಿ ಪೂಜೆ ಜರಗಲಿರುವುದು.

ರಾತ್ರಿ 8. 00 ಗಂಟೆ ಸರಿಯಾಗಿ ಕಾಂತೇರಿ ಜುಮಾದಿ ದೈವ ದರ್ಶನ ಸೇವೆ. ನಂತರ ದೈವ ದರ್ಶನದೊಂದಿಗೆ ಉಡುಪಿ ಜೋಡು ಕಟ್ಟೆ ಗಡುವಾಡಿನಲ್ಲಿ ವಿಧಿ ವಿಧಾನಗಳು ನಡೆಯಲಿರುವುದು. ಕ್ಷೇತ್ರದ ಭಕ್ತಾದಿಗಳು ಈ ಒಂದು ದೈವದ ಪುಣ್ಯದ ಕಾರ್ಯದಲ್ಲಿ ಭಾಗವಹಿಸಿ ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ. ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಬೊಬ್ಬರ್ಯ ಸೇವಾ ಸಮಿತಿ.

