ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಮೇ 30 ರಂದು ಶ್ರೀ ದೇವಾಲಯದಲ್ಲಿ ಶ್ರೀ ನರಸಿಂಹ ಹವನ ಹಾಗೂ ಲಕ್ಷ್ಮೀ ಸಹಸ್ರನಾಮ ಸಹಿತ ಕುಂಕುಮಅರ್ಚನೆ ಹಾಗೂ ಪುಷ್ಪಅರ್ಚನೆ ಜರುಗಿತು.
ಶ್ರೀದೇವರಿಗೆ ವಿಶೇಷ ಅಲಂಕಾರ , ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು ದೇವಳದ ಪ್ರಧಾನ ಅರ್ಚಕರಾದ ದಯಾಘನ್ ಭಟ್ , ವಿನಾಯಕ ಭಟ್ , ರವೀಂದ್ರ ಭಟ್ , ದೀಪಕ್ ಭಟ್ , ಗಿರೀಶ್ ಭಟ್ , ರಮೇಶ್ ಭಟ್ , ದೇವಸ್ಥಾನದ ಮೇನೇಜಿಂಗ್ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ , ಹವನದ ಪೂಜೆಯಲ್ಲಿ ವಿಶಾಲ್ ಶೆಣೈ ದಂಪತಿ ಸಹಕರಿಸಿದರು.
ವಿಶ್ವಸ್ಥ ಮಂಡಳಿಯ ಸದಸ್ಯರು ವಿವಿಧ ಭಜನಾ ಮಂಡಳಿಯ ಸದಸ್ಯರು , ಜಿ ಎಸ್, ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.

