ಜೀವನದ ಮೌಲ್ಯಗಳನ್ನು ಕಲಿಸಿ ಸಮಾಜದ ಆಸ್ತಿಯನ್ನಾಗಿ ರೊಪಿಸಬೇಕು – ಡಾ ಸಂಧ್ಯಾ ಪೈ

0
8

ಅನಂತ ವೈದಿಕ ಕೇಂದ್ರ ಉಡುಪಿ , ಸುಪ್ರಸಿದ್ಧ ರಂಗಕರ್ಮಿ , ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ, ಚಲನ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಇವರ ನಿರ್ದೇಶನ ರಂಗಭೂಮಿ ಕಾರ್ಯಗಾರ ಮೇ 30 ರಂದು  ಒಳಕಾಡು ಪದ್ಮಾವತಿ ಸಭಾ ಸದನದಲ್ಲಿ 2 ದಿನದ ಕೊಂಕಣಿ ರಂಗಾಂತರ ರಂಗ ತರಬೇತಿ ಕಾರ್ಯ ಕ್ರಮಕೆ  ತರಂಗ ವಾರ ಪತ್ರಿಕೆ ಸಂಪಾದಕಿ   ಡಾ .  ಸಂಧ್ಯಾ ಪೈ  ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಕೊಂಕಣಿ ಸಾಹಿತ್ಯ,ಭಾಷೆ  , ಸಂಸ್ಕೃತಿ ಉಳಿಸಿ ಬೆಳಸಲು ಇಂತಹ ಕಾರ್ಯಗಾರ ನಿರಂತರವಾಗಿ ನಡೆಯಲಿ, ಮಕ್ಕಳಿಗೆ ಕಲೆ , ಸಂಸ್ಕೃತಿ , ಜೀವನದ ಮೌಲ್ಯಗಳನ್ನು ಕಲಿಸಿ ಸಮಾಜದ ಆಸ್ತಿಯನ್ನಾಗಿ ರೊಪಿಸಬೇಕು , ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ್ದಲ್ಲಿ ನಾವು ಕೊಡ ಉತ್ತಮ ಕಲಾವಿದರಾಗಿ ರೊಪಗೊಳ್ಳಲು ಸಾಧ್ಯವೆಂದರು.   

ಮುಖ್ಯ ಅತಿಥಿಗಳಾದ ಪುತ್ತೂರು ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ತಾನ ಇದರ ಆಡಳಿತ ಮೊಕ್ತೇಸರ ವಸಂತ ನಾಯಕ್ , ದೈವಜ್ಞ ಬ್ರಾಹ್ಮಣ ಸಮಾಜ ಉಡುಪಿ ಅಧ್ಯಕ್ಷರಾದ ಶಿವಶಂಕರ ಶೇಟ್ , ಸಭೆಯ ಅಧ್ಯಕ್ಷತೆ ಯನ್ನು ಸಮಾಜ ಸೇವಕ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವ ಅಧ್ಯಕ್ಷರಾದ ವಿಶ್ವನಾಥ್ ಶೆಣೈ  ವಹಿಸಿದ್ದರು , ಕೊಂಕಣಿ ರಂಗಾ ತರಂಗ ಸಂಚಾಲಕ ಶಶಿ ಭೂಷಣ ಕಿಣಿ ಉಪಸ್ಥಿತರಿದ್ದರು.

ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೆ. ಮೂ . ಚೆಂಪಿ ರಾಮಚಂದ್ರ  ಭಟ್ ಸ್ವಾಗತಿಸಿ , ಕಾರ್ಯ ಕ್ರಮ ನಿರೂಪಿಸಿದರು. ಕೊಂಕಣಿ ಮಾತನಾಡುವ ವಿವಿಧ ಸಮಾಜದ ವಿದ್ಯಾರ್ಥಿಗಳು ಉಪಸ್ಥರಿದ್ದರು .

ಕೊಂಕಣಿ ಆಕಾಡಮಿ ಮಾಜಿ ಅಧ್ಯಕ್ಷ ಹಾಗೂ    ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ ಕೊಂಕಣಿ ಭಾಷೆ  ಸಂಸ್ಕೃತಿ ಬೆಳೆಸುವ ಉದ್ದೇಶ ದಿಂದ  ಈ  ಕಾರ್ಯ  ಹಮ್ಮಿಕೊಂಡಿದ್ದೂ ರಂಗ ಕ್ಷೇತ್ರದ ಕಲೆಯನ್ನು  ಉಳಿಸಿ ಬೆಳೆಸುವಲ್ಲಿ ಸಮಾಜ ಬಾಂದವರು ಕೈ ಜೋಡಿಸುವಂತೆ ಕರೆನೀಡಿದರು    ಕಾಸರಗೋಡು ಚಿನ್ನಾ ಶಿಬಿರಾರ್ಥಿ ಗಳಿಗೆ  ರಂಗ ತರಬೇತಿ ಗಳಾದ  ಧ್ವನಿ , ಭಾಷೆ , ಅಭಿನಯ ಹಾಗೂ ಮುಖಾ ಅಭಿನಯ , ವಿವಿಧ ಭಾಷೆಗಳ ಮೂಲಕ ಅಭಿನಯಿಸುವ  ಕಲಾ ಪ್ರಕಾರಗಳನ್ನು  ಮಕ್ಕಳಿಗೆ ತಿಳಿ ಹೇಳಿ  ಹುರಿ ದುಂಬಿಸಿದರು.            

LEAVE A REPLY

Please enter your comment!
Please enter your name here