ಕೊಂದಾಪುರ : ಹರಕೆ ಬಯಲಾಟದ ನಡುವೆಯೇ ಕೃಷ್ಣ ಪಾತ್ರಧಾರಿ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ, ದೊಂಬರಾಟ ಅಲ್ಲ ಇದು ಎಂದ ಘಟನೆ ನಡೆದಿದೆ.
ಕುಂದಾಪುರದ ಹೆನ್ನಾಬೈಲ್ ನಲ್ಲಿ ನಡೆದ ಧರ್ಮಸ್ಥಳ ಮೇಳದ ಹರಕೆ ಬಯಲಾಟದಲ್ಲಿ ಭಾಗವತರ ಪದಕ್ಕೆ ಪ್ರೇಕ್ಷಕರು ಶಿಳ್ಳೆ ಹೊಡೆದಾಗ ಕೃಷ್ಣ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ರವರು ರಂಗಸ್ಥದಿಂದಲೇ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ, ದೊಂಬರಾಟ ಅಲ್ಲ ಇದು.
ನನಗೆ ದಾಕ್ಷಿಣ್ಯ ಇಲ್ಲ, ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ ಎಂದು ಎಂದು ಪ್ರಸಂಗದ ಮಧ್ಯೆ ಪ್ರೇಕ್ಷಕರನ್ನು ಕೃಷ್ಣ ಪಾತ್ರಧಾರಿ ಅಶೋಕ್ ಭಟ್ ಉಜಿರೆ ತರಾಟೆಗೆ ತೆಗೆದು ಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆ ಆರಂಭವಾಗಿದೆ.

