ಏಪ್ರಿಲ್ 2 ರಂದು ಸಾಮೂಹಿಕ ಶ್ರೀ ಗಾಯತ್ರಿ ಪೂಜೆ ಹಾಗೂ ಉಪಾಸನೆ ಕಾರ್ಯಕ್ರಮ
ದಾವಣಗೆರೆ : ನಗರದ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಪ್ರತೀ ತಿಂಗಳ ಹುಣ್ಣಿಮೆಯೆಂದು ನಡೆಸುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ, ದವನದ ಹುಣ್ಣಿಮೆ ಅಂಗವಾಗಿ ದಿನಾಂಕ 02-04-2026 ರಂದು ಗುರುವಾರ ಬೆಳಿಗ್ಗೆ 7-00ಕ್ಕೆ ನಡೆಯಲಿದೆ ಎಂದು ಶ್ರೀ ಗಾಯಿತ್ರಿ ಪರಿವಾರದ ಮಾಜಿ ಅಧ್ಯಕ್ಷರಾದ ಡಾ|| ರಮೇಶ್ ಪಟೇಲ್ ತಿಳಿಸಿದ್ದಾರೆ.
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ನಡೆಯಲಿರುವ ಈ ಅಪ್ಪಟ ಆಧ್ಯಾತ್ಮ ಸಮಾರಂಭದ ಈ ಬಾರಿಯ ಪೂಜಾ ಸೇವಾಕರ್ತರಾದ ಪ್ರೇಮ್‌ಜಿ ಪಟೇಲ್ ಮತ್ತು ಕುಟುಂಬ, ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ಮತ್ತು ಕುಟುಂಬ, ಶ್ರೀ ಗಾಯತ್ರಿ ಪರಿವಾರದ ಸಮಿತಿ ಸದಸ್ಯರಾದ ವಿ.ಕೃಷ್ಣಮೂರ್ತಿ ಮತ್ತು ಕುಟುಂಬ ಪುರುಷೋತ್ತಮ ಬೈ ಪಟೇಲ್ ಕುಟುಂಬದವರು ಕಳೆದ ಇಪ್ಪತ್ತೆöÊದು ವರ್ಷಗಳಿಂದಲೂ ನಿರಂತರವಾಗಿ ಪ್ರತೀ ಪೂರ್ಣಿಮೆ ಯಂದು ನಡೆಯುವ ಈ ಧಾರ್ಮಿಕ ಪ್ರಕ್ರಿಯೆಯಲ್ಲಿ ಆಸಕ್ತ ಸಾರ್ವಜನಿಕರು ಯಾವುದೇ ಜಾತಿ, ಮತ, ವರ್ಣ, ಲಿಂಗ ಬೇಧವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

