ಮೂಡುಬಿದಿರೆ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ ಮೂಡುಬಿದಿರೆ ವಲಯ ಹಾಗೂ ಮೂಡುಬಿದಿರೆ ವಕೀಲರ ಸಂಘದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮಧುಕರ್ ಭಾಗವತ್ ಹಾಗೂ ನ್ಯಾಯಾಧೀಶೆ ಕಾವೇರಮ್ಮ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ., ಹಿರಿಯ ವಕೀಲರಾದ ಕೆ.ಆರ್ ಪಂಡಿತ್, ದಿವಿಜೇಂದ್ರ ಕುಮಾರ್, ಪ್ರವೀಣ್ ಲೋಬೊ, ಜಯಪ್ರಕಾಶ್, ಪದ್ಮಪ್ರಸಾದ್ ಜೈನ್, ಮರ್ವಿನ್ ಲೋಬೊ, ಆನಂದ್, ಶ್ವೇತಾ, ಸಂದೇಶ್, ಜಗನ್ನಾಥ್, ವಕೀಲರು ಹಾಗು ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.