ಹಳ್ಳಾಡಿ: ಹಳ್ಳಾಡಿಯಿಂದ ಕೇದಾರನಾಥಕ್ಕೆ ಪ್ರಶ್ನಾ ಚಿಂತಕರಾದ ವೇದಬ್ರಹ್ಮ ಮುರುಳಿಧರ್ ಕೆತ್ಲಾಯಿಯಾವರು ಜೂನ್ 11 ರಂದು ಪಾದಯಾತ್ರೆ ಕೈಗೊಂಡಿದ್ದು ಪ್ರಸ್ತುತ ಶೃಂಗೇರಿ ತಲುಪಿ ಮಠದಲ್ಲಿ ಪಾದ ಪೂಜೆ ಮುಗಿಸಿಕೊಂಡು ಪಾದಯಾತ್ರೆ ಮುಂದುವರಿಸಿದ್ದಾರೆ. ಇವರ ಜೊತೆಗೆ ರಾಘವೇಂದ್ರ ಭಟ್ ಅವರು ಕೂಡ ಪಾದಯಾತ್ರೆಗೆ ಜೊತೆಯಾಗಿದ್ದು, ಇಂದು(ಜೂನ್12) ತೀರ್ಥಹಳ್ಳಿಯ ಚಿಟ್ಟೆ ಬೈಲಿನಲ್ಲಿ ಉಳಿದುಕೊಂಡು ಮತ್ತೆ ಪ್ರಯಾಣ ಬೆಳೆಸಿದ್ದಾರೆ.