ವೀಣಾ ಪ್ರಸನ್ನ ವಿಷ್ಣು ಮಂಗಲ ಕೂಡ್ಲು ಇವರೀಗೆ “ಕಾಸರಗೋಡು ದಸರಾ ಸಾಧಕ ಪ್ರಶಸ್ತಿ “

0
44

ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ 11.10.2026.ರಿಂದ 20.10.2026 ರ ವರೆಗೆ ಕಾಸರಗೋಡು ಕನ್ನಡ ಭವನ ಪ್ರಾಯೋಜಕತ್ವ ದಲ್ಲಿ ದೇವಸ್ಥಾನ ಸಾಂಸ್ಕೃತಿಕ ಘಟಕ ಸಹಯೋಗದಲ್ಲಿ ನಡೆಯುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026.ವತಿಯಿಂದ ವೀಣಾ ಪ್ರಸನ್ನ ಇವರೀಗೆ ಕಾಸರಗೋಡು ದಸರಾ ಸಾಧಕ ಪ್ರಶಸ್ತಿ ಶ್ರೀ ಕ್ಷೇತ್ರ ನಡೆಯಲ್ಲಿ ಕ್ಷೇತ್ರ ಪಾತ್ರಿಗಳು ಹಾಗೂ ಸಾಂಸ್ಕೃತಿಕ ಘಟಕ ಅಧ್ಯಕ್ಷರು, ಕನ್ನಡ ಭವನದ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀ ರಮೇಶ್ ಕುದ್ರೆಕೋಡ್, ಕುಂಬಳೆ, ಸಂಧ್ಯಾ ರಾಣಿ ಟೀಚರ್ ಸೇರಿ ಸಾಧಕ ಪ್ರಶಸ್ತಿ, ಫಲಪುಷ್ಪ, ಶಾಲು, ಹಾರದೊಂದಿಗೆ ಗೌರವಿಸಿದರು. ಪ್ರದೀಪ್ ನಾಯ್ಕ್ ಸ್ವಾಗತಿಸಿ, ಗುರು ಚರಣ್ ಕೋಟೆಕಣಿ ವಂದಿಸಿದರು ಡಾ.ಭುವನೇಶ್ವರಿ ಭವ್ಯ ಕುಂಬಳೆ ನಿರೂಪಿಸಿದರು.