ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ

0
27
  • ‘ಸಾಂಪ್ರದಾಯಿಕ ಕಂಬಳ ಜಗತ್ತಿನಾದ್ಯಂತ ಪಸರಿಸಿದೆ’ – ಜಯರಾಮ ಶೆಟ್ಟಿ

ತುಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯದೊಂದಿಗೆ ನಡೆಸಿಕೊಂಡು ಬಂದ ಕಂಬಳವು ಇಂದು ಜಗತ್ತಿನಾದ್ಯಂತ ಪಸರಿಸಿದೆ ಎಂದು ಕುಡುಂಬೂರುಗುತ್ತು ಕನಿಲ ಕ್ಷೇತ್ರದ ಗುತ್ತಿನಾರ್ ಜಯರಾಮ ಶೆಟ್ಟಿ ಹೇಳಿದರು.

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ವತಿಯಿಂದ ಶನಿವಾರ ನಡೆದ 4ನೇ ವರ್ಷದ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ’ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿದ್ಧಕಟ್ಟೆ ವೈದ್ಯ ಡಾ. ಸುದೀಪ್ ಕುಮಾರ್ ಜೈನ್ ಕಂಬಳದ ಕರೆ ಉದ್ಘಾಟಿಸಿ ಶುಭ ಹಾರೈಸಿದರು. ವೈದ್ಯ ಡಾ. ಕೃಷ್ಣಮೂರ್ತಿ ಭಟ್ ಕಂಬಳದ ಧ್ವಜಾರೋಹಣ ನೆರವೇರಿಸಿದರು. ಹಿರಿಯ ವೈದ್ಯ ಡಾ. ಪ್ರಭಾಚಂದ್ರ ಜೈನ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಸಿದ್ಧಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ ಶುಭ ಹಾರೈಸಿದರು.

ಸಿದ್ಧಕಟ್ಟೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮೈಕಲ್ ಡಿಕೋಸ್ತ, ತಹಸೀಲ್ದಾರ್ ಜಿ. ಮಂಜುನಾಥ್, ಜಯ ಶೆಟ್ಟಿ ಕುಡುಂಬೂರು, ಯೋಗೀಶ್ ಶೆಟ್ಟಿ ಕುಡುಂಬೂರು, ಪ್ರಜ್ವಲ್ ಶೆಟ್ಟಿ ವಾಮದಪದವು, ಕೆ. ಪರಮೇಶ್ವರ ಪೂಜಾರಿ ರಾಯಿ, ವೇಣುಗೋಪಾಲ ಶೆಟ್ಟಿ ಮಾವಿನಕಟ್ಟೆ, ಉದ್ಯಮಿ ರಕ್ಷಣ್ ಮೇಲಾಂಟ ಹಾಗೂ ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ಉಪಸ್ಥಿತರಿದ್ದರು.

ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಟ್ವಾಳ ತಾಲ್ಲೂಕಿನಲ್ಲಿ ಪ್ರಸಕ್ತ ಕಂಬಳ ಋತುವಿನ ಮೊದಲ ಕಂಬಳ ಇದಾಗಿದೆ. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ಏಳು ಕಂಬಳಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಮಿತಿ, ಸ್ಥಳದಾನಿಗಳು ಹಾಗೂ ಎಲ್ಲರ ಸಹಕಾರ ಮತ್ತು ಪರಿಶ್ರಮ ಕಾರಣವಾಗಿದೆ ಎಂದರು.

ಸಮಿತಿಯ ಗೌರವ ಸಲಹೆಗಾರ ಕಿರಣ್ ಕುಮಾರ್ ಮಂಜಿಲ, ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಲ್ಲಾಪು, ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಮಧುಸೂದನ್ ಸಾಲ್ಯಾನ್ ಕಲಾಯಿದಡ್ಡ, ಉಮೇಶ್ ಶೆಟ್ಟಿ ಕೊನೆರೊಟ್ಟು, ಸಂದೇಶ್ ಶೆಟ್ಟಿ ಪೊಡುಂಬ, ನವೀನ್ ಹೆಗ್ಡೆ ಮಣಿಪಾಲ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಚಂದ್ರಶೇಖರ ಪೂಜಾರಿ ಕೊಡಂಗೆ, ಜನಾರ್ದನ ಬಂಗೇರ ತಿಮರಡ್ಕ, ಉಮೇಶ್ ಹಿಂಗಾಣಿ, ಅವನ್ ಕುಮಾರ್ ಜೈನ್ ಪಣೆಬೆಟ್ಟು, ಸ್ಥಳದಾನಿ ಓಬಯ್ಯ ಪೂಜಾರಿ ಕೊಡಂಗೆ, ಲಲಿತಾ ಕೊರಗಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.

ಸಮಿತಿಯ ಗೌರವ ಸಲಹೆಗಾರ ವಸಂತ ಶೆಟ್ಟಿ ಕೇದಗೆ ವಂದಿಸಿದರು. ಗೌರವ ಸಲಹೆಗಾರ ಸುರೇಶ್ ಶೆಟ್ಟಿ ಸಿದ್ಧಕಟ್ಟೆ ಹಾಗೂ ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಕಾರ್ಯಕ್ರಮ ನಿರೂಪಿಸಿದರು.

ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ

‘ಸಾಂಪ್ರದಾಯಿಕ ಕಂಬಳ ಜಗತ್ತಿನಾದ್ಯಂತ ಪಸರಿಸಿದೆ’ – ಜಯರಾಮ ಶೆಟ್ಟಿ