ವೇಣೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವಕ್ಕೆ ದಶಕದ ಸಂಭ್ರಮ

0
48

ವೇಣೂರು: ಇಲ್ಲಿಯ ಮಹಾವೀರ ನಗರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಹಾಗೂ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ವತಿಯಿಂದ ಜರಗುತ್ತಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಗೆ ಈ ಬಾರಿ ದಶಮಾನೋತ್ಸವ ಸಂಭ್ರಮ.
ಆ.17ರಂದು ನಡೆಯಲಿರುವ ಅಷ್ಠಮಿ ಸಂಭ್ರಮದ ಪ್ರಯುಕ್ತ ಪೂರ್ವಭಾವಿ ಸಭೆ ಜರಗಿತು. ಸಭೆಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ದಶಮಾನೋತ್ಸವ ಆಚರಣಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಉದ್ಯಮಿ ಸತೀಶ್‌ ಚಿಗುರು, ಕಾರ್ಯದರ್ಶಿಯಾಗಿ ಶೇಷ ಎಂ. ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್‌ ಅವರನ್ನು ನೇಮಿಸಲಾಗಿದೆ. ಕೋಶಾಧಿಕಾರಿಯಾಗಿ ಪ್ರಮೋದ್‌ ಶೆಟ್ಟಿ ಸಿರಿಮನೆ ಹಾಗೂ ವಿವಿಧ ಸದಸ್ಯರನ್ನು ಆಯ್ಕೆಮಾಡಲಾಗಿದೆ. ಕಾರ್ಯಕ್ರಮದ ರಾತ್ರಿ ಖ್ಯಾತ ಯಕ್ಷಗಾನ ಕಲಾವಿದ ಸದಾಶಿವ ಕುಲಾಲ್‌ ವೇಣೂರು ಅವರಿಂದ ತರಬೇತಿ ಪಡೆದ ಪುಟಾಣಿಗಳಿಂದ ಯಕ್ಷಗಾನ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದೆ.

LEAVE A REPLY

Please enter your comment!
Please enter your name here