ವೇಣೂರು: ವೇಣೂರು-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಕರಿಮಣೇಲು ಬಳಿ ರಾಜ್ಯಹೆದ್ದಾರಿ ಬದಿ ಬೃಹತ್ ಹೊಂಡ ನಿರ್ಮಾಣ ಆಗಿದ್ದು, ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿದೆ. ಹೊಂಡದಲ್ಲಿ ಮಳೆನೀರು ಶೇಖರವಾಗಿರುವುದರಿಂದ ಹೊಂಡ ಸವಾರರಿಗೆ ಗೊತ್ತಾಗುತ್ತಿಲ್ಲ. ಇದರಿಂದ ಅನೇಕ ಸವಾರರು ಈಗಾಗಲೇ ಹೊಂಡಕ್ಕೆ ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿದೆ. ರಾತ್ರಿ ವೇಳೆಯಲ್ಲಂತೂ ಇದು ಭಾರೀ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ದ್ವಿಚಕ್ರ ಮಾತ್ರವಲ್ಲದೆ ಘನ ವಾಹನಗಳಿಗೂ ಅಪಾಯ ತಂದೊಡ್ಡಬಹುದಾದ ಈ ಹೊಂಡಕ್ಕೆ ಸ್ಥಳೀಯರು ಮರದ ದಿಮ್ಮಿ ಇಟ್ಟು ಎಚ್ಚರಿಕೆ ಸೂಚಿಸಿದ್ದಾರೆ. ಹೆದ್ದಾರಿ ಇಲಾಖೆ ತಕ್ಷಣ ಇದಕ್ಕೊಂದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.
Home Uncategorized ವೇಣೂರು; ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೆದ್ದಾರಿಯ ಬೃಹತ್ ಹೊಂಡ..! ತುರ್ತು ದುರಸ್ತಿಗೆ ಆಗ್ರಹ

