ವಿಟ್ಲ ಹೋಬಳಿ ಮಟ್ಟದ ಅದಾಲತ್; ಆರೋಗ್ಯ ತಪಾಸಣಾ ಕಾರ್ಯಕ್ರಮ

0
130

ಕಲ್ಲಡ್ಕ :ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ ವತಿಯಿಂದ ವೀರಕಂಬ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ವಿಟ್ಲ ಹೋಬಳಿ ಮಟ್ಟದ ಕೊರಗ ಸಮಾಜದವರ ದಾಖಲೆಗಳ ಸರಿಪಡಿಸಲು ಅದಾಲತ್ ಕಾರ್ಯಕ್ರಮ ವೀರ ಕಂಬ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜರಗಿತು.

ಕಾರ್ಯಕ್ರಮದಲ್ಲಿ ಕೊರಗ ಸಮುದಾಯದವರಿಗೆ ಸರಕಾರದಿಂದ ನೀಡಲ್ಪಡುವ ವಿವಿಧ ಯೋಜನೆಗಳಾದ ಗೃಹಲಕ್ಷ್ಮಿ ಪಿಂಚಣಿ, ಆರೋಗ್ಯ ಇಲಾಖೆಗಳಿಂದ ನೀಡಲ್ಪಡುವ ಯೋಜನೆಗಳನ್ನು ಪಡೆದುಕೊಳ್ಳಲು ಹಾಗೂ ಆಧಾರ್ ಕಾರ್ಡ್ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ ಜನನ ಪ್ರಮಾಣ ಪತ್ರ ಮರಣ ಪ್ರಮಾಣ ಪತ್ರ ಮುಂತಾದವುಗಳ ದಾಖಲೆಗಳು ಇಲ್ಲದೆ ಇವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದಿರುವುದರಿಂದ ಇವುಗಳನ್ನು ಪಡೆಯಲು ಸಂಬಂಧ ಪಟ್ಟ ಇಲಾಖೆಗಳ ಮೂಲಕ ಪಡೆಯಲು ಸಹಕಾರಿ ಆಗುವಂತೆ ಅದಾಲತ್ ಕಾರ್ಯಕ್ರಮ
ಮಾಡಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಕೊರಗ ಸಮಾಜ ಬಾಂಧವರ ಆರೋಗ್ಯ ತಪಾಸಣಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ತಾಲೂಕು ಉಪ ತಹಸಿಲ್ದಾರ್ ನವೀನ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಅಶೋಕ್ ರೈ, ಆಹಾರ ಶಿರಸ್ತೆದಾರ ರವಿ, ಸಮಾಜ ಕಲ್ಯಾಣಾಧಿಕಾರಿ ವಿನಯ್ ಕುಮಾರಿ ಕೆ ಬಿ, ವಿರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ರೂಪಕಲ, ಕೊರಗ ಸಮುದಾಯದ ಮುಖಂಡರಾದ ಸುಂದರ್, ಕೊಗ್ಗ ರಮೇಶ್, ನವೀನ್,ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here