ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ವಿವೇಕ ಸಂಕಲ್ಪ– 2026” : ಪೋಷಕರ ಸಮಾವೇಶ ಹಾಗೂ ಕಾಲೇಜು ಪ್ರಾರಂಭೋತ್ಸವ

0
10

 ಖ್ಯಾತ ಮನೋವೈದ್ಯಡಾ. ವಿರೂಪಾಕ್ಷದೇವರಮನೆಅವರಿಂದ ವಿಶೇಷ ಅವಧಿಗಳು
 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿಕಾರ್ಯಾಗಾರ

2026-27 ನೇ ಸಾಲಿನ ವಿವೇಕಾನಂದ ಪದವಿಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳ ವಿದ್ಯಾರ್ಥಿ-ಪೋಷಕರ ಸಮಾವೇಶ“ವಿವೇಕಸಂಕಲ್ಪ– 2026” ಎಂಬಶೀರ್ಷಿಕೆಯೊAದಿಗೆಜೂನ್ 4ರಂದುಹಾಗೂಜೂನ್ 5 ರಂದುನಡೆಯಲಿದೆ.

ವಿಜ್ಞಾನ ವಿಭಾಗದ ಪೋಷಕರ ಸಭೆ ಹಾಗೂ ಕಾಲೇಜು ಪ್ರಾರಂಭೋತ್ಸವ
ಜೂನ್ 4ರಂದುಕಾಲೇಜುಆವರಣದ ಕೇಶವ ಸಂಕಲ್ಪ ಸಭಾಭವನದಲ್ಲಿಬೆಳಗ್ಗೆ 10 ಗಂಟೆಗೆಸರಿಯಾಗಿ ವಿಜ್ಞಾನ ವಿಭಾಗದ ಪೋಷಕರ ಸಭೆ ನಡೆಯಲಿದ್ದು ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ. ಪಿ.ಇವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದಡಾ.ಕೆ. ಎನ್. ಸುಬ್ರಹ್ಮಣ್ಯ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿಯಡಾ. ಎ. ವಿ. ಬಾಳಿಗಾ ಸ್ಮಾರಕಆಸ್ಪತ್ರೆಯಖ್ಯಾತ ಮನೋವೈದ್ಯರು ಹಾಗೂ ಲೇಖಕರಾದಡಾ. ವಿರೂಪಾಕ್ಷದೇವರಮನೆಅವರು ಭಾಗವಹಿಸಿ ಪೋಷಕರಿಗೆ “ಸುಗಮ ಪಾಲನೆಗೆ ಹೊಸ ತಲೆಮಾರಿನ ಸವಾಲುಗಳು” ಎಂಬ ವಿಷಯದಕುರಿತು ವಿಶೇಷಉಪನ್ಯಾಸವನ್ನು ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಅತ್ಯಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

ವಾಣಿಜ್ಯ ಹಾಗೂ ಕಲಾ ವಿಭಾಗದ ಪೋಷಕರ ಸಭೆ ಹಾಗೂ ಕಾಲೇಜು ಪ್ರಾರಂಭೋತ್ಸವ
ಜೂನ್ 5 ರಂದು ವಿವೇಕಾನಂದ ಪದವಿಪೂರ್ವಕಾಲೇಜಿನ ವೈದೇಹಿ ಸಭಾಂಗಣದಲ್ಲಿಬೆಳಗ್ಗೆ 10 ಗಂಟೆಗೆಸರಿಯಾಗಿಕಲಾ ಹಾಗೂ ವಾಣಿಜ್ಯ ವಿಭಾಗದ ಪೋಷಕರ ಸಭೆ ನಡೆಯಲಿದ್ದು ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ. ಪಿ.ಇವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸಚಿನ್ ಶೆಣೈ ಕೆ. ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಮನೋವೈದ್ಯರು ಹಾಗೂ ಲೇಖಕರಾದಡಾ. ವಿರೂಪಾಕ್ಷದೇವರಮನೆಅವರು ಭಾಗವಹಿಸಿ ಪೋಷಕರಿಗೆ”ಪೋಷಕರು ಹಾಗೂ ಮಕ್ಕಳ ಮಧ್ಯೆ ಮನೋವಿಜ್ಞಾನದ ಸತ್ಯಗಳು” ಎಂಬ ವಿಷಯದಕುರಿತು ವಿಶೇಷಉಪನ್ಯಾಸವನ್ನು ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿಕಾರ್ಯಾಗಾರ ನಡೆಯಲಿದೆ.ಈ ಕಾರ್ಯಕ್ರಮದಲ್ಲಿವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಅತ್ಯಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

ಸರಸ್ವತಿ ಪೂಜೆ
ಕಾಲೇಜು ಪ್ರಾರಂಭೋತ್ಸವದ ಪ್ರಯುಕ್ತಜೂನ್ 6 ರಂದುಕಶೆಕೋಡಿ ಸೂರ್ಯನಾರಾಯಣ ಭಟ್‌ಅವರ ನೇತೃತ್ವದಲ್ಲಿ ಬೆಳಗ್ಗೆ 7.30 ರಿಂದ ಸರಸ್ವತಿ ಪೂಜೆ ನಡೆಯಲಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಜೂನ್ 5 ಹಾಗೂ ವಾಣಿಜ್ಯ ಹಾಗೂ ಕಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಜೂನ್ 6 ರಿಂದ ತರಗತಿಗಳು ಮುಂದುವರಿಯಲಿವೆ.

ಈ ಕಾರ್ಯಕ್ರಮಗಳಲ್ಲಿ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದದೇವಿಚರಣ್‌ರೈಎಮ್, ಪೋಷಕರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here