ಚಿಕ್ಕಮಗಳೂರು: ಆಸ್ತಿ ಕೈತಪ್ಪುತ್ತೆ ಎಂದು ಪತ್ನಿಯೇ ಲವರ್ ಜೊತೆ ಸೇರಿ ಪತಿಯನ್ನ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಸಮೀಪದ ಲಕ್ಯಾ ಕ್ರಾಸ್ ನಲ್ಲಿ ನಡೆದಿದೆ.
ಮೃತನನ್ನ 55 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಲವರ್ ಸಿದ್ದರಾಜು ಜೊತೆ ಸೇರಿ ಮೃತ ಶ್ರೀನಿವಾಸ್ ಪತ್ನಿ ಸುಮಾಳೆ ಕೊಲೆ ಆರೋಪಿ ಆಗಿದ್ದಾರೆ.
ಆಕೆಯ ಕುತ್ತಿಗೆಗೆ ಮೊಬೈಲ್ ಕೇಬಲ್ ಸುತ್ತಿ ಕೊಲೆ: ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದ ಶ್ರೀನಿವಾಸ್ಗೆ! ಇಬ್ಬರು ಪತ್ನಿಯರು. ಮೊದಲ ಪತ್ನಿ ಸುಮಾರು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಆಕೆಗೆ ನಾಲ್ಕು ಜನ ಮಕ್ಕಳಿದ್ದರು. ಶ್ರೀನಿವಾಸ್ ಸುಮಾಳನ್ನ ಎರಡನೇ ಮದುವೆಯಾಗಿದ್ದರು. ಸುಮಾಳಿಗೆ ಎರಡು ಹೆಣ್ಣು ಮಕ್ಕಳಿದ್ದು, ಇಬ್ಬರದ್ದೂ ಮದುವೆಯಾಗಿದೆ. ಆದರೆ, ಸುಮಾಳಿಗೆ ಸಿದ್ದರಾಜು ಎಂಬುವರ ಜೊತೆ ಅಕ್ರಮ ಸಂಬಂಧವಿತ್ತು ಎಂದು ಶ್ರೀನಿವಾಸ್ ಹಿರಿಯ ಹೆಂಡತಿ ಮಕ್ಕಳು ಆರೋಪಿಸಿದ್ದು, ಲವರ್ ಜೊತೆ ಸೇರೆ ಆಕೆಯ ಕುತ್ತಿಗೆಗೆ ಮೊಬೈಲ್ ಕೇಬಲ್ ಸುತ್ತಿ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಗೆ ಇವರ ಜಮೀನು ಹೋಗಿದ್ದು ಬಂದಂತಹಾ ಹಣವನ್ನ ಹಂಚಿಕೊಂಡಿದ್ದರು. ಈಗ ಉಳಿದಿರುವ ಆಸ್ತಿಯನ್ನ ಪಾಲು ಮಾಡೋಕೆ ಮೃತ ಶ್ರೀನಿವಾಸ್ ಮುಂದಾಗಿದ್ದರು. ಅವರು ಆಸ್ತಿಯನ್ನ ಡಿವೈಡ್ ಮಾಡುತ್ತಾರೆ. ಆಸ್ತಿ ಸಿಗುವುದಿಲ್ಲ. ಶ್ರೀನಿವಾಸ್ ಸತ್ತರೆ ಹೆಂಡತಿಯಾದ ನನ್ನ ಹೆಸರಿಗೆ ಎಲ್ಲಾ ಆಸ್ತಿ ಬರುತ್ತೆಂದು ಲವರ್ ಸಿದ್ದರಾಜು ಜೊತೆ ಸುಮಾಳೇ ಗಂಡ ಶ್ರೀನಿವಾಸ್‌ರನ್ನ ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸರಿಂದ ತನಿಖೆ: ಸಿದ್ದರಾಜು ಜೊತೆ ಸುಮಾ ಗಂಡನನ್ನ ಕೊಲ್ಲುವುದನ್ನ ಸುಮಾಳ ಹಿರಿಯ ಮಗಳ ಮಗು ನೋಡಿದೆಯಂತೆ. ಮೊಬೈಲ್ ಚಾರ್ಜರ್ ಕೇಬಲ್ಲಿನಲ್ಲಿ ಕುತ್ತಿಗೆ ಸುತ್ತಿ, ಕೇಬಲ್ನ ಮನೆಯ ಹಟ್ಟದ ಮೇಲೆ ಎಸೆದಿದ್ದಾರೆ ಎಂದು ಮಗು ಹೇಳಿದೆಯಂತೆ. ಪೊಲೀಸರು ಬಂದಾಗ ಮಗುವೇ ಮೊಬೈಲ್ ಕೇಬಲ್ ಹಟ್ಟದ ಮೇಲೆ ಇದ್ದದ್ದನ್ನ ತೋರಿಸಿದೆಯಂತೆ. ಹಾಗಾಗಿ, ಮೃತ ಶ್ರೀನಿವಾಸ್ ಹಿರಿಯ ಹೆಂಡತಿ ಮಕ್ಕಳು ಆಸ್ತಿಗಾಗಿ ಸುಮಾಳೆ ಗಂಡನನ್ನ ಕೊಲೆ ಮಾಡಿದ್ದಾಳೆಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಶ್ರೀನಿವಾಸ್ ಹಿರಿಯ ಹೆಂಡತಿ ಪುತ್ರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಎಫ್.ಐ.ಆರ್. ದಾಖಲಾಗಿದ್ದು, ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿದ್ದರಾಜು ಹಾಗೂ ಸುಮಾಳ ಬಂಧನವಾಗಿಲ್ಲ ಎಂದು ಮೃತನ ಕುಟುಂಬಸ್ಥರು ಪೊಲೀಸರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.