
ಲಯನ್ಸ್ ಕ್ಲಬ್ ಬೆಳ್ಮಣ್ ವತಿಯಿಂದ ಸಂತ ಜೋಸೆಫರ ಶಾಲಾ ವಿದ್ಯಾರ್ಥಿಗಳಿಗಾಗಿ ಮಾನವೀಯತೆಯಲ್ಲಿ ಸಾಮರಸ್ಯ ಎಂಬ ವಿಷಯದ ಕುರಿತು ಜಾಗತಿಕ ಶಾಂತಿ ಚಿತ್ರ ಸ್ಪರ್ಧೆಯನ್ನು ಸಂಘಟಿಸಲಾಯಿತು. ಮಾಜಿ ಜಿಲ್ಲಾ ಗವರ್ನರ್ ಲಯನ್ ಎನ್ ಎಮ್ ಹೆಗಡೆ ಸ್ಪರ್ಧೆಯ ಉದ್ದೇಶ, ನಿಯಮಗಳನ್ನು ವಿವರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಸಂಯೋಜಕರಾದ ಲಯನ್ ರಮಾ ಬೋಳಾರ್, ಮಾಜಿ ಅಧ್ಯಕ್ಷರುಗಳಾದ ಲಯನ್ ಸದಾನಂದ ಭಟ್, ಲಯನ್ ರಂಜಿತ್ ಕೆ ಎಸ್, ಲಯನ್ ಸೀತಾರಾಮ್ ಭಟ್ ಮತ್ತು ಲಯನ್ ಆಶಾ ಭಟ್ ಭಾಗವಹಿಸಿದ್ದರು. ಕಾರ್ಯದರ್ಶಿ ಲಯನ್ ಟೀನಾ ಡೆಸಾ ಸರ್ವರಿಗೂ ವಂದಿಸಿದರು.
