ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಣಿ ಬೆಳವಡಿ ಮಲ್ಲಮ್ಮ ಸ್ಮರಣಾರ್ಥ ಭಾರತಿದರ್ಶ ಫೌಂಡೇಶನ್‌ನಿಂದ 100 ಉಚಿತ ಕುಡಿಯುವ ನೀರಿನ ಸೇವೆ

0
5

ಬೆಂಗಳೂರು ; ವೀರವನಿತೆಯರಾದ ರಾಣಿ ಬೆಳವಡಿ . ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರ ಸ್ಮರಣಾರ್ಥವಾಗಿ, ಭಾರತಿದರ್ಶ ಫೌಂಡೇಶನ್ ವತಿಯಿಂದ ಬೆಂಗಳೂರಿನ 100 ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಹಾಗೂ ಅಗತ್ಯವಿರುವವರಿಗೆ ಉಚಿತ ಕುಡಿಯುವ ನೀರಿನ ಸೇವೆ ಒದಗಿಸುವ ಉದ್ದೇಶದಿಂದ 100 ನೀರಿನ ಕ್ಯಾನ್‌ಗಳನ್ನು ದೇಣಿಗೆಯಾಗಿ ನೀಡಲಾಗಿದೆ.

ಸಮಾಜಸೇವೆ, ಮಾನವೀಯತೆ ಹಾಗೂ ಸಾರ್ವಜನಿಕರ ಕಲ್ಯಾಣವನ್ನು ಗುರಿಯಾಗಿಸಿಕೊಂಡಿರುವ ಭಾರತಿದರ್ಶ ಫೌಂಡೇಶನ್, ನೀರಿನ ಅಗತ್ಯವಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಹಮ್ಮಿಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವುದು ಮತ್ತು ಜನರಲ್ಲಿ ಸೇವಾ ಮನೋಭಾವವನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ನಾಡಿನ ವೀರ ಮಹಿಳೆಯರಾದ ರಾಣಿ ಬೆಳವಡಿ ಮಲ್ಲಮ್ಮ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರು ಧೈರ್ಯ, ಸ್ವಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿದ್ದಾರೆ. ಅವರ ಆದರ್ಶಗಳನ್ನು ಸ್ಮರಿಸುತ್ತಾ, ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯಗಳ ಮೂಲಕ ಅವರ ಸ್ಮರಣೆಯನ್ನು ಅರ್ಥಪೂರ್ಣಗೊಳಿಸುವುದು ಫೌಂಡೇಶನ್‌ ಆಶಯವಾಗಿದೆ.

“ಮಾನವೀಯತೆಯೇ ನಮ್ಮ ಧರ್ಮ, ಸಮಾಜಸೇವೆಯೇ ನಮ್ಮ ಗುರಿ” ಎಂಬ ಆಶಯದೊಂದಿಗೆ ಭಾರತಿದರ್ಶ ಫೌಂಡೇಶನ್ ಶಿಕ್ಷಣ, ಪರಿಸರ ಸಂರಕ್ಷಣೆ, ಗಿಡ ನೆಡುವಿಕೆ, ಆರೋಗ್ಯ ಶಿಬಿರಗಳು, ಪ್ರಾಣಿ ಸಂರಕ್ಷಣೆ ಹಾಗೂ ಅಗತ್ಯವಿರುವವರಿಗೆ ನೆರವು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಈ ನೀರಿನ ಸೇವಾ ಕಾರ್ಯಕ್ರಮವು ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ, ಸಮಾಜದಲ್ಲಿ ಸೇವೆ ಮತ್ತು ಸಹಕಾರದ ಮನೋಭಾವವನ್ನು ಹೆಚ್ಚಿಸಲಿ ಎಂಬುದು ಫೌಂಡೇಶನ್‌ನ ಆಶಯವಾಗಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಸ್ವಾಮಿ , ಪೀಣ್ಯ ಕೈಗಾರಿಕಾ ಸಂಘ, ಬಸವರಾಜ ಎನ್ ಕೆ ರಾಷ್ಟ್ರೀಯ ಅಧ್ಯಕ್ಷರು ಭಾರತಿದರ್ಶ್ ಫೌಂಡೇಶನ್, ದಿವಾಕರ. ಎಸ್. ಕೆ. ಉಪ ನಿರ್ದೇಶಕರು ದಿವ್ಯಾಂಗರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ದಾನಪ್ಪ ಮಾಜಿ ಅಧ್ಯಕ್ಷರು ಪೀಣ್ಯ ಕೈಗಾರಿಕಾ ಸಂಘ, ಮಲ್ಲೇಶ್ ಗೌಡ ಹೆಚ್. ಕೆ, ಶ್ರೀಧ‌ರ್ ಅಂದಾನಪ್ಪ, ಭೂಷಣ್ ಶ್ರೀಮತಿ ಲೀಲಾವತಿ, ಶೈಲೇಂದ್ರ ಕುಮಾರ್ ಪಾಟೀಲ್ ಸಂಸ್ಥಾಪಕರು, ಭಾರತಿದರ್ಶ ಫೌಂಡೇಶನ್ ಭಾಗವಹಿಸಿದವರು