ಲಯನ್ಸ್ ಕ್ಲಬ್ ಬೆಳ್ಮಣ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ ವಿದ್ಯಾರ್ಥಿಗಳಿಗಾಗಿ ಮಾನವೀಯತೆಯಲ್ಲಿ ಸಾಮರಸ್ಯ ಎಂಬ ವಿಷಯದ ಕುರಿತು ಜಾಗತಿಕ ಶಾಂತಿ ಚಿತ್ರ ಸ್ಪರ್ಧೆಯನ್ನು ಸಂಘಟಿಸಲಾಯಿತು.
ಕ್ಲಬ್ಬಿನ ಕಾರ್ಯದರ್ಶಿ ಲಯನ್ ಟೀನಾ ಡೆಸಾರವರು ಸ್ಪರ್ಧೆಯ ಉದ್ದೇಶ, ಮಕ್ಕಳ ಭವಿಷ್ಯ, ಶಾಂತಿ ಸೌಹಾರ್ದತೆಯ ಮಹತ್ವ ಮತ್ತು ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು. ಆ ಸಂಧರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಬಿ ಎಚ್ ಶಿವರಾಮ ಆಚಾರ್ಯ, ಲಯನ್ ಜ್ಯೋತಿ ಆಚಾರ್ಯ, ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು. ಕ್ಲಬ್ಬಿನ ಕಾರ್ಯದರ್ಶಿ ಲಯನ್ ಟೀನಾ ಡೆಸಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕ್ಲಬ್ಬಿ ನ ಕಾರ್ಯದರ್ಶಿ ಲಯನ್ ಟೀನಾ ಡೆಸಾ ರವರು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

