ಜೇಸಿಐ ಮುಂಡ್ಕೂರು ಭಾರ್ಗವದ ವತಿಯಿಂದ “ವಿಶ್ವ ಯೋಗ ದಿನಾಚರಣೆ”ಯನ್ನು ಶ್ರೀ ಸುಬ್ರಮಣ್ಯ ಪ್ರೌಢ ಶಾಲೆ ಕಡಂದಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಯೋಗ ಗುರುಗಳಾಗಿ ಸುರೇಂದ್ರ ಪತಂಜಲಿ ಯೋಗ ಮೂಡಬಿದರೆ ಇವರು ಯೋಗ ತರಬೇತಿ ನೀಡಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಕೀಲರಾದ ಶಾಂತಿ ಪ್ರಸಾದ ಹೆಗ್ಡೆ ಮೂಡಬಿದರೆ ಹಾಗೂ ಆರೋಗ್ಯಧಿಕಾರಿಯಾದ ಸಾಗರ ಪವಾರ್, ಶಾಲಾ ಮುಖ್ಯ ಶಿಕ್ಷಕರಾದ ದಿನಕರ ಕುಂಬಾಶಿ, ಕಾರ್ಯದರ್ಶಿ ಉಮೇಶ್ ನಾಯ್ಕ, ಪೂರ್ವಾಧ್ಯಕ್ಷರಾದ ಸುಧಾಕರ ಸರ್, JC ಸದಸ್ಯರಾದ ಸಂಪತ್ ರಾಜ್, ಶಾಲಾ ಶಿಕ್ಷಕ ವೃಂದದವರು ಮತ್ತು 160 ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.