ಅಡ್ಯಾಲು ಅಜಿಲಮೊಗರಿನಲ್ಲಿ ಯಕ್ಷ ಚಿಗುರು ಕಲಾತಂಡದ 7ನೇ ವರ್ಷದ ಯಕ್ಷಗಾನ ಹಾಗೂ ನೃತ್ಯ ತರಗತಿ ಉದ್ಘಾಟನೆ

0
35


ಅಡ್ಯಾಲು ಅಜಿಲಮೊಗರು: ಯಕ್ಷಗಾನ ಮತ್ತು ಸಾಂಸ್ಕೃತಿಕ ಕಲೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಯಕ್ಷ ಚಿಗುರು ಕಲಾತಂಡ, ಅಡ್ಯಾಲು ಅಜಿಲಮೊಗರು ಇದರ ಎರಡನೇ ವರ್ಷದ ಯಕ್ಷಗಾನ ತರಗತಿ ಹಾಗೂ ನೃತ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಿನ್ನೆ ಕಲಾತಂಡದ ನಾರಾಯಣ ಗುರುವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಪೂಜಾರಿ ಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಯಾಣಿ ಕ್ಯಾಟರಿಂಗ್‌ನ ಮಾಲಕರಾದ ಲೋಕೇಶ್ ಪೂಜಾರಿ, ಬ್ರಹ್ಮಶ್ರೀ ವೆಲ್ಡಿಂಗ್‌ನ ಮಾಲಕರಾದ ಪ್ರಶಾಂತ್, ಮಧುಶ್ರೀ ಮೇಗಿನಮನೆ, ಶಶಿಕಲಾ ತಿಂಗಳಾಡಿ ಹಾಗೂ ಕಲಾತಂಡದ ಸ್ಥಾಪಕರಾದ ನವೀನ್ ಶಾಂತಿ ಮತ್ತು ಯಕ್ಷ ಗುರುಗಳಾದ ಶಶಿಧರ್ ಬಾಚಕೆರೆ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅತಿಥಿಗಳು ಮಾತನಾಡಿ, ಯಕ್ಷಗಾನ ಮತ್ತು ಸಾಂಸ್ಕೃತಿಕ ಕಲೆಗಳು ನಮ್ಮ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಇಂತಹ ತರಗತಿಗಳ ಮೂಲಕ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಹಾಗೂ ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಮೋದ್ ಬೊಲ್ಲುಕಲ್ಲು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಕಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here