ಅಯ್ಯಪ್ಪ ಭಕ್ತವೃಂದ (ರಿ.) ಅದಿಉಡುಪಿ ; ಕ್ರಿಕೆಟ್ ಪಂದ್ಯಾಕೂಟ

0
52

ಉಡುಪಿ : ಅಯ್ಯಪ್ಪ ಭಕ್ತವೃಂದ (ರಿ.) ಅದಿಉಡುಪಿ ಬೈಪಾಸ್ ಇದರ ಆಶ್ರಯದಲ್ಲಿ ಸಂಘದ ಸದಸ್ಯರುಗಳಿಗಾಗಿ ಧರ್ಮಶಾಸ್ತ ಪ್ರೀಮಿಯರ್ ಲೀಗ್ 2026(ಸೀಸನ್ 1) ಕ್ರಿಕೆಟ್ ಪಂದ್ಯಾಕೂಟವು ದೊಡ್ಡನಗುಡ್ಡೆ ಸಾರ್ವಜನಿಕ ಮೈದಾನದಲ್ಲಿ ಇತ್ತೀಚಿಗೆ  ನೆಡೆಯಿತು , ಪದ್ಯಾವಳಿಯನ್ನು  ಸಂಘದ ಅಧ್ಯಕ್ಷರಾದ ಕೃಷ್ಣ ಅಂಬಲಪಾಡಿ ಹಾಗೂ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಗೌರೀಶ್ ಕೋಟ್ಯಾನ್ ಇವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಪಂದ್ಯಾಕೂಟದಲ್ಲಿ ಕೃಷ್ಣ ಅಂಬಲಪಾಡಿ ಮಾಲಕತ್ವದ ಮಣಿಕಂಠ ವಾರಿಯರ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ ಮಣಿಕಂಠ ಮೆಂಡನ್ ಇವರ ನೇತೃತ್ವದ ತಂಡ ತತ್ವಮಸಿ ಇಲೆವೆನ್ಸ್ ತಂಡ ಎರಡನೇ ಬಹುಮಾನ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಗೌರೀಶ್ ಕೋಟ್ಯಾನ್ ರವರು ಕ್ರಿಕೆಟ್ ಪಂದ್ಯ  ದೈಹಿಕ  ಸಾಮರ್ಥ್ಯ  , ಆರೋಗ್ಯ ,ಜೊತೆಗೆ   ಇಂತಹ ಕ್ರೀಡೆ ಯಿಂದ ಸಂಘಟನೆಯಲ್ಲಿ ಯುವಕಕರು ಭಾಗವಹಿಸುವಿಕೆಯು  ಏಕತೆ ,  ಒಗ್ಗಟ್ಟು ಹಾಗೂ ಶಿಸ್ತಿನ ಜೀವನ ಜೊತೆಗೆ   ಶ್ರೀಸ್ವಾಮಿಯ  ಅನುಗ್ರಹದಿಂದ  ಮಂದಿರ ನಿರ್ಮಾಣ ಕಾರ್ಯಗಳಲ್ಲಿ  ಎಲ್ಲರೊ ಕೈಜೋಡಿಸುವಂತೆ ಕರೆ ನೀಡಿದರು , ಸಮಿತಿಯ ಸದಸ್ಯರು ಹಾಗೂ ಅಯ್ಯಪ್ಪ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here