ಸುರತ್ಕಲ್ ಇಡ್ಯಾ ದೇವಾಲಯದಲ್ಲಿ ಯಕ್ಷಗಾನ ದಶಮಾನ ಸಂಭ್ರಮ ಸಮಾರೋಪ

0
53

ವರದಿ ರಾಯಿ ರಾಜ ಕುಮಾರ
ಸುರತ್ಕಲ್ ತಡಂಬೈಲು ದುರ್ಗಾಂಬ ಮಹಿಳಾ ಯಕ್ಷಗಾನ ಮಂಡಳಿ 1996 ರಲ್ಲಿ ಆರಂಭವಾಗಿ 2015 ರಿಂದ ಪೂರ್ಣ ಪ್ರಮಾಣದ ತಾಳಮದ್ದಳೆಯನ್ನು ಪ್ರಾರಂಭಿಸಿತು . ಈತನಕ 520 ಕಾರ್ಯಕ್ರಮಗಳನ್ನು ನೀಡಿದ್ದು ಡಿಸೆಂಬರ್ 22 ರಿಂದ 31ನೇ ತನಕ ಇಡ್ಯ ಮಹಾಲಿಂಗೇಶ್ವರ ದೇವಾಲಯದಲ್ಲಿ ದಶಮಾನ ವರ್ಷ ಸಂಭ್ರಮಾಚರಣೆಯ ಸಮರೋಪ ಸಮಾರಂಭ ನಡೆಯಲಿದೆ. ಹಿರಿಯ ಕಲಾವಿದರನ್ನು ಸನ್ಮಾನಿಸುತ್ತಾ ಮಹಿಳೆಯರೇ ತಾಳಮದ್ದಳೆಯನ್ನು ನಡೆಸಿಕೊಡುತ್ತಿರುವುದು ಸಂಸ್ಥೆಯ ವಿಶೇಷತೆ . ಪುತ್ತೂರು, ಮಂಗಳೂರು, ಕಾರ್ಕಳ ಇತ್ಯಾದಿ ಕಡೆಯ ಮಹಿಳಾ ತಾಳಮದ್ದಳೆ, ಜರುಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ಮಂಡಳಿಯ ಗುರು ಹಾಗೂ ನಿರ್ದೇಶಕ ವಾಸುದೇವ ರಾವ್, ಅಧ್ಯಕ್ಷ ಸುಲೋಚನಾ ರಾವ್, ಕಾರ್ಯದರ್ಶಿ ಸುಮಿತ್ರ ಕಲ್ಲೂರಾಯ ಹಾಗೂ ವೃಂದಾ ಹಾಜರಿದ್ದರು .

LEAVE A REPLY

Please enter your comment!
Please enter your name here