ವರದಿ ರಾಯಿ ರಾಜ ಕುಮಾರ
ಮಂಗಳೂರಿನ ಉರ್ವ ಸ್ಟೋರ್ ಬಳಿಯ ತುಳು ಭವನ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಡಿಸೆಂಬರ್ 26 ರಿಂದ 30 ರ ತನಕ ಐದು ದಿನ ಒಂಬತ್ತು ಸುತ್ತುಗಳಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದೊಂದಿಗೆ ರಾಷ್ಟ್ರೀಯ ಓಪನ್ ಫಿಡೇ ರೇಟೆಡ್ ಚೆಸ್ ಪಂದ್ಯಾವಳಿ ನಡೆಯಲಿದೆ.
ಜಿಲ್ಲೆಯ ಇಶಾ ಶರ್ಮ ಮಹಿಳೆಯರ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದು ನಮ್ಮೆಲ್ಲರಿಗೆ ಸಂತಸಕರ ಸಂಗತಿ. ದೇಶದ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ವಿಶ್ವ ಚಾಂಪಿಯನ್ ಆಗಿ, ವೈಯಕ್ತಿಕ ವಿಭಾಗದಲ್ಲಿಯೂ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಾರೆ. ಅಂತಹ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ 400 ಆಟಗಾರರು ಮಂಗಳೂರಿನಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ದೇಶಕ್ಕೆ ಮಾದರಿಯಾಗಿ ಚೆಸ್ ಪಂದ್ಯ ಬೆಳೆಯಬೇಕೆಂಬುದು ಆಶಯ. ಪಂದ್ಯದಲ್ಲಿ ಒಟ್ಟು ಆರು ಲಕ್ಷ ನಗದು ಬಹುಮಾನಗಳಿದ್ದು ವಿವಿಧ ವಿಭಾಗಗಳಲ್ಲಿ ಟ್ರೋಫಿ ಹಾಗೂ ಬಹುಮಾನಗಳು ದೊರೆಯಲ್ಲಿವೆ ಇಂದು ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಅಮರಶ್ರೀ ಎ. ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಚೆಸ್ ಅಸೋಸಿಯೇಷನ್ ನ ಗೌರವಾಧ್ಯಕ್ಷ ಸುನಿಲ್ ಆಚಾರ್, ಉಪಾಧ್ಯಕ್ಷ ರಮೇಶ್ ಕೋಟೆ, ರೋಟರಿ ಕ್ಲಬ್ ನ ರಾಜಗೋಪಾಲರೈ, ವಾಣಿ ಎಸ್ ಪಣಿಕ್ಕರ್, ಸತ್ಯಪ್ರಸಾದ್ ಹಾಜರಿದ್ದರು. ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ್ ರೈ ಸ್ವಾಗತಿಸಿ ವಂದಿಸಿದರು.
.


