ಸುರತ್ಕಲ್: ಇಲ್ಲಿಯ ಚೇಳಾರುವಿನ ಕಳುವಾರು ಹಿರಿಯ ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಕಳುವಾರು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ. 25ರಂದು ಮಕ್ಕಳಿಗೆ ಸಮವಸ್ತ್ರ ಹಾಗೂ ಬರವಣಿಗೆ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮವು ಸಾoಕೇತಿಕವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ MRPL ಸಂಸ್ಥೆಯ HSE ವಿಭಾಗದ ಇಂಜಿನಿಯರ್ ಶಿವಕುಮಾರ್ ಹಾಗೂ ಪವಿತ್ರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಟ್ರಸ್ಟಿನ ಪದಾಧಿಕಾರಿಗಳು, ಪಂಚಾಯತಿಯ ಉಪಾಧ್ಯಕ್ಷೆ, ಮುಖ್ಯ ಶಿಕ್ಷಕಿ, ಶಾಲಾ ಶಿಕ್ಷಕಿಯರು, ಹೆತ್ತವರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮುಖ್ಯ ಶಿಕ್ಷಕಿ ಶೋಭಾ. ಸಿ ಸ್ವಾಗತಿಸಿದರು. ವಿದ್ಯಾ ವಿಕಾಸ ಟ್ರಸ್ಟ್ ನ ಉಪಾಧ್ಯಕ್ಷರು ಬಿ. ರಾಘವ ಸನಿಲ್, ಕಾರ್ಯದರ್ಶಿ ಬಿ. ಲಕ್ಷ್ಮೀಶರಾವ್, ಶಾಲಾ ಸಂಚಾಲಕರು ಹಾಗೂ ಟ್ರಸ್ಟಿನ ಕೋಶಾಧಿಕಾರಿ ಬಿ. ರವೀಂದ್ರರಾವ್, ಚೇಳಾರ್ ಪಂಚಾಯತಿಯ ಪಿಡಿಒ ಕೆ. ನಿತ್ಯಾನಂದ, ಪಂಚಾಯಿತಿ ಉಪಾಧ್ಯಕ್ಷೆ ರೇಖಾ. ಬಿ ಉಪಸ್ಥಿತರಿದ್ದರು. ಎಸ್. ಡಿ. ಎಂ. ಸಿ ಅಧ್ಯಕ್ಷರು ಹಾಗೂ ಟ್ರಸ್ಟಿನ ಪದಾಧಿಕಾರಿ ಬಿ. ಗಂಗಾಧರ ಪೂಜಾರಿಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಅಭಿನೇತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ತೇಜಶ್ರೀ ಎಮ್ ವಂದಿಸಿದರು.