
ವಿಜ್ಞಾನವಿಭಾಗದ ಅಭಿರಾಮ್ ವಿ. ಭಟ್ 599 ಅಂಕಗಳೊಂದಿಗೆ ರಾಜ್ಯಕ್ಕೆ 2ನೇ ರ‍್ಯಾಂಕ್
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ಮೇ ಯಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ 599 ಅಂಕಗಳೊಂದಿಗೆ ರಾಜ್ಯಕ್ಕೆ 2ನೇ ರ‍್ಯಾಂಕ್ (ಬಂಟ್ವಾಳ ತಾಲೂಕಿನ ವಸಂತ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ.ಕೆ ದಂಪತಿಗಳ ಪುತ್ರ) ಪ್ರಾಪ್ತಿ ಆಳ್ವ 594 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್ (ಬಂಟ್ವಾಳ ತಾಲೂಕಿನ ಸರಪಾಡಿಯ ಪ್ರವೀಣ ಆಳ್ವ ಹಾಗೂ ಸವಿತಾ ಆಳ್ವಾ ದಂಪತಿಗಳ ಪುತ್ರಿ) ಸಮೃದ್ಧಿ ಜೆ. ಶೆಟ್ಟಿ 593 ಅಂಕಗಳೊAದಿಗೆ ರಾಜ್ಯಕ್ಕೆ 8 ನೇ ರ‍್ಯಾಂಕ್ (ಪುತ್ತೂರು ತಾಲೂಕಿನ ಜಗದೀಶ್ ಶೆಟ್ಟಿ ಎನ್. ಹಾಗೂ ಹರಿಣಾಕ್ಷಿ ಜೆ. ಶೆಟ್ಟಿ ದಂಪತಿಗಳ ಪುತ್ರಿ) ಸನ್ನಿಧಿ ಕಲ್ಲೂರಾಯ (ಪುತ್ತೂರು ತಾಲೂಕಿನ ರಾಜೇಶ್ ಪಿ. ಹಾಗೂ ಕೃತಿ ಬಿ ಜಿ. ದಂಪತಿಗಳ ಪುತ್ರಿ) ಮನೋಜ್ಞ ಸಿ. ಎಚ್.(ಕಾಸರಗೋಡು ತಾಲೂಕಿನ ಸಿ. ಎಚ್ ರಾಮಮೋಹನ್ ಹಾಗೂ ವಿಜಯಲಕ್ಷ್ಮಿ ಕೆ. ದಂಪತಿಗಳ ಪುತ್ರಿ) 591 ಅಂಕಗಳೊAದಿಗೆ ರಾಜ್ಯಕ್ಕೆ 10 ನೇ ರ‍್ಯಾಂಕ್ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದ ತನ್ವಿ ಭಟ್ 592 ಅಂಕಗಳೊAದಿಗೆ ರಾಜ್ಯಕ್ಕೆ 9 ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಬೆಂಗಳೂರಿನ ಅನಂತ ಪದ್ಮನಾಭ ಭಟ್ ಹಾಗೂ ಸ್ಮಿತಾ ದಂಪತಿಗಳ ಪುತ್ರಿ.
ಒಟ್ಟು 457 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 321 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ.ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
