ಯುಪಿಯಲ್ಲಿ ಸತತ ಎರಡು ದಿನಗಳ ಕಾಲ ರಾಮನವಮಿ ರಜೆ ಘೋಷಿಸಿದ ಸಿಎಂ
ಉತ್ತರ ಪ್ರದೇಶ : ಇದೇ ಮಾರ್ಚ್ 26 ರಂದು ದೇಶದಾದ್ಯಂತ ರಾಮನವಮಿ (Ram Navami Holiday) ಆಚರಿಸಲಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಮಾರ್ಚ್ 27 ರಂದು ಸಹ ಸಾರ್ವಜನಿಕ ರಜೆಯನ್ನು ಯೋಗಿ ಸರ್ಕಾರ ಘೋಷಿಸಿದೆ.
ಉತ್ತರ ಪ್ರದೇಶದಲ್ಲಿ ರಾಮನವಮಿಯನ್ನು ಬಹಳ ಅದ್ಧೂರಿಯಾಗಿ ಆಚರಿಸುವ ಹಿನ್ನಲೆ ಇಲ್ಲಿನ ದೇವಸ್ಥಾನಗಳೆಗೆ ಅಧಿಕ ಭಕ್ತರು ಆಗಮಿಸುವ ಕಾರಣ ಮಾರ್ಚ್ 26 ಮತ್ತು ಮಾರ್ಚ್ 27 ಎರಡು ದಿನ ರಜೆಯನ್ನು ನೀಡಲಾಗಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ನಮ್ಮ ಸರ್ಕಾರ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೆವೆ ಮತ್ತು ಅವರಿಗೆ ಧಾರ್ಮಿಕ ಆಚರಣೆಗಳನ್ನು ನಡೆಸಲು ಅನುಕೂಲ ಮಾಡಿಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಈ ದಿನವನ್ನು ಶ್ರೀರಾಮ ಮತ್ತು ಸೀತೆಯ ವಿವಾಹದ ಸಂಕೇತವಾಗಿ ಶ್ರೀರಾಮ ಸೀತಾ ಕಲ್ಯಾಣೋತ್ಸವನ್ನಾಗಿ ಆಚರಿಸುವ ಸಂಪ್ರದಾಯವೂ ಇದೆ. ಹಬ್ಬದ ಅಂಗವಾಗಿ ಮನೆಮನೆಗಳಲ್ಲಿ ಪಾನಕ, ಮಜ್ಜಿಗೆ ಮತ್ತು ಕೋಸಂಬರಿಯನ್ನು ಪ್ರಸಾದವಾಗಿ ಹಂಚುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಒಟ್ಟಾರೆಯಾಗಿ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರಲು ಮತ್ತು ಸನ್ಮಾರ್ಗದಲ್ಲಿ ನಡೆಯುವ ಸ್ಫೂರ್ತಿ ಪಡೆಯಲು ಭಾರತೀಯರು ರಾಮನವಮಿಯನ್ನು ಆಚರಿಸುತ್ತಾರೆ.

