ಯುವ ಸಂಶೋಧಕ ದೀಪಕ್ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಭೇಟಿ ಮಾಡಿ ಅಶ್ರಿವಾದ ಪಡೆದುಕೊಂಡರು.
ಪತ್ರಮೆ ಗ್ರಾಮದ ಯುವ ಸಂಶೋಧಕ ಮತ್ತು ಭಾರತ್ ದೀಪ R&D INDIA ಸಂಸ್ಥಾಪಕ ದೀಪಕ್ ಕುಮಾರ್ ಅವರ ವೈಜ್ಞಾನಿಕ ಸಾಧನೆಯನ್ನು ಗುರುತಿಸಿ ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವದಿಸಿದ್ದಾರೆ.
ಈ ಸಂದರ್ಭದಲ್ಲಿ ದೀಪಕ್ ಅವರು ತಮ್ಮ India Book of Records ಸಾಧನೆ ಮತ್ತು ರಕ್ಷಣಾ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡುತ್ತಿರುವ ಸಂಶೋಧನೆಯ ದೂರದೃಷ್ಟಿಯನ್ನು ಸ್ವಾಮೀಜಿಯವರಿಗೆ ವಿವರಿಸಿದರು.
ಈ ಭೇಟಿ ತನಗೆ ಸಿಕ್ಕ ಅತ್ಯಂತ ದೊಡ್ಡ ಮೈಲಿಗಲ್ಲು ಎಂದು ದೀಪಕ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಆಶೀರ್ವಾದವು ತನ್ನ ಸಂಶೋಧನೆಗೆ ಮತ್ತಷ್ಟು ಸ್ಪೂರ್ತಿ ನೀಡಲಿದೆ ಎಂದು ಹೇಳಿದ್ದಾರೆ.

