ಕಾಪು ಆ.9ರಂದು ‘ಯುವವಾಹಿನಿ ಟ್ರೋಫಿ’ ಓಪನ್‌ ಹಾಗೂ ವಯೋಮಿತಿ ಚೆಸ್‌ ಸ್ಪರ್ದೆ -2026

0
9

ಕಾಪು : ಯುವವಾಹಿನಿ (ರಿ.) ಕಾಪು ಘಟಕದ ವತಿಯಿಂದ ‘ಯುವವಾಹಿನಿ ಟ್ರೋಫಿ ಓಪನ್ ಹಾಗೂ ವಯೋಮಿತಿ ರ‍್ಯಾಪಿಡ್ ಚೆಸ್ ಟೂರ್ನಮೆಂಟ್-2026’ ಆ.9ರಂದು ಶ್ರೀ ಹಳೇ ಮಾರಿಯಮ್ಮ ಸಭಾ ಭವನ ಕಾಪು ನಲ್ಲಿ ನಡೆಯಲಿದೆ.

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಸಹಯೋಗದಲ್ಲಿ ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಶನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಕಾರದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಬೆಳಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 10.30ಕ್ಕೆ ಮೊದಲ ಸುತ್ತು ಆರಂಭವಾಗಲಿದೆ.

ಓಪನ್ ವಿಭಾಗದೊಂದಿಗೆ U-7, U-9, U-11, U-13 ಹಾಗೂ U-17 ವಯೋಮಿತಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಒಟ್ಟು ₹30,303 ನಗದು ಬಹುಮಾನ ಹಾಗೂ 128 ಬಹುಮಾನಗಳು ಸ್ಪರ್ಧಾರ್ಥಿಗಳಿಗೆ ಲಭಿಸಲಿವೆ. ವಿವಿಧ ವಿಭಾಗಗಳಲ್ಲಿ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಓಪನ್ ವಿಭಾಗದಲ್ಲಿ ಪ್ರಥಮ ಬಹುಮಾನ ₹5,000, ದ್ವಿತೀಯ ₹4,000 ಹಾಗೂ ತೃತೀಯ ₹3,000 ಸೇರಿದಂತೆ ಟಾಪ್ 15 ಸ್ಥಾನಗಳಿಗೆ ಬಹುಮಾನ ನಿಗದಿಪಡಿಸಲಾಗಿದೆ. 60 ವರ್ಷ ಮೇಲ್ಪಟ್ಟ ಅತ್ಯುತ್ತಮ ಆಟಗಾರ, ಅತ್ಯುತ್ತಮ ಮಹಿಳಾ ಆಟಗಾರ್ತಿ ಹಾಗೂ ಅತಿ ಕಿರಿಯ ಆಟಗಾರರಿಗೂ ವಿಶೇಷ ಬಹುಮಾನಗಳಿವೆ.

ಸ್ಪರ್ಧೆಯು FIDE ನಿಯಮಾವಳಿಯಂತೆ ಸ್ವಿಸ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ಪಂದ್ಯಕ್ಕೆ 15 ನಿಮಿಷ + 5 ಸೆಕೆಂಡ್ ಇನ್‌ಕ್ರಿಮೆಂಟ್ ಸಮಯ ನಿಗದಿಪಡಿಸಲಾಗಿದೆ. ಕರ್ನಾಟಕದ ಆಟಗಾರರಿಗೆ KSCA ನೋಂದಣಿ ಕಡ್ಡಾಯವಾಗಿದೆ. ಜನ್ಮ ದಿನಾಂಕದ ದಾಖಲೆ ಸಲ್ಲಿಸುವುದು ಅಗತ್ಯವಾಗಿದೆ.

ಸಂಜೆ 5 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿಯ ಅಧ್ಯಕ್ಷ ಮಹೇಶ್ ಎನ್. ಅಂಚನ್, ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಚೆಸ್ ಆಟಗಾರರಿಗೆ ಹಾಗೂ ಅವರೊಂದಿಗೆ ಬರುವವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9611284576, 8088625123 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.