ಶಿರ್ಲಾಲು : ನ.1ರಂದು 4ನೇ ವರ್ಷದ ಮೂಲ್ಯರೆ ಯಾನೆ ಕೆಸರ್‌ದ ಗೊಬ್ಬು

0
18

ಅಳದಂಗಡಿ: ಮೂಲ್ಯರ ಯಾನೆ ಕುಲಾಲ ಸಂಘ (ರಿ.), ಅಳದಂಗಡಿ ಇದರ ವತಿಯಿಂದ 4ನೇ ವರ್ಷದ ಮೂಲ್ಯರೆ ಯಾನೆ ಕೆಸರ್‌ದ ಗೊಬ್ಬು ಕಾರ್ಯಕ್ರಮವನ್ನು ನವೆಂಬರ್ 1ರ ಭಾನುವಾರ ಆಯೋಜಿಸಲಾಗಿದೆ.

ಗ್ರಾಮೀಣ ಸಂಸ್ಕೃತಿ ಹಾಗೂ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಗಳಾದ ಕೆಸರುಗದ್ದೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ. ಅಳದಂಗಡಿಯ ಕೊಚೋಟ್ಟು ಮನೆಯ ಗದ್ದೆಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಸಂಘದ ಸದಸ್ಯರು, ಊರಿನ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.

ತುಳುನಾಡಿನ ಮಣ್ಣಿನ ಸಂಸ್ಕೃತಿ, ಕೃಷಿ ಪರಂಪರೆ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಕೆಸರ್‌ದ ಗೊಬ್ಬು ಕಾರ್ಯಕ್ರಮವು ಗ್ರಾಮೀಣ ಕ್ರೀಡಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ವೇದಿಕೆಯಾಗಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರು ಸರ್ವ ಸದಸ್ಯರು ಪ್ರಕಟಣೆ ಮಾಡಿದ್ದಾರೆ.