ಮಣಿಪಾಲ: ಮಾಹೆಯ ಎಂ.ಐ.ಸಿ ಕ್ಯಾಂಪಸ್‌ನಲ್ಲಿರುವ ರೇಡಿಯೊ ಮಣಿಪಾಲ 90.4 ಮೆಗಾಹರ್ಟ್ಸ್ ಸಮುದಾಯ ಬಾನುಲಿ ಕೇಂದ್ರದ ‘ಗ್ರಾಹಕ ಜಾಗೃತಿ’ ಸರಣಿಯ 14ನೇ ಸಂಚಿಕೆ ಅಕ್ಟೋಬರ್ 8ರಂದು ಗುರುವಾರ ಸಂಜೆ 4.15ಕ್ಕೆ ಪ್ರಸಾರವಾಗಲಿದೆ.
ಈ ಸಂಚಿಕೆಯಲ್ಲಿ ಉಡುಪಿಯ ಬಳಕೆದಾರರ ವೇದಿಕೆಯ ವಿಶ್ವಸ್ಥ ನಿಡುವಜೆ ರಾಮ ಭಟ್ ಅವರು ಗ್ರಾಹಕ ಜಾಗೃತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದ ಮರುಪ್ರಸಾರ ಅಕ್ಟೋಬರ್ 9ರಂದು ಮಧ್ಯಾಹ್ನ 12.15ಕ್ಕೆ ನಡೆಯಲಿದೆ.
ರೇಡಿಯೊ ಮಣಿಪಾಲದ ಕಾರ್ಯಕ್ರಮವನ್ನು ಆಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿ ರೇಡಿಯೊ ಮಣಿಪಾಲ ಆಪ್ ಡೌನ್‌ಲೋಡ್ ಮಾಡುವ ಮೂಲಕವೂ ಆಲಿಸಬಹುದು ಎಂದು ರೇಡಿಯೊ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

