
ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಕಲ್ಯಾಣ್ ಸ್ಥಳೀಯ ಕಛೇರಿಯ ವತಿಯಿಂದ ಅಕ್ಟೋಬರ್ 2026 ರ ತಿಂಗಳಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಮಾಜಪರ ಚಟುವಟಿಕೆಗಳು ನಡೆದವು.
ದಿನಾಂಕ 12.10.2026 ರಂದು ಕಲ್ಯಾಣ್ ಪಶ್ಚಿಮ ದಲ್ಲಿರುವ ದುರ್ಗಾಡಿ ಕಿಲ್ಲ, ದುರ್ಗಾದೇವಿಯ ಮಂದಿರದಲ್ಲಿ ಭಜನಾ ಕಾರ್ಯಕ್ರಮ, ದಿನಾಂಕ 14.10.2026 ರಂದು ಕರ್ನಾಟಕ ಸೇವಾ ಸಂಫ ಮೋಹನೆ, ಅಂಬಿವಿಲಿ ಇಲ್ಲಿ ನವರಾತ್ರಿಯ ಪ್ರಯುಕ್ತ ಭಜನೆ ಹಾಗೂ ಅನ್ನ ಸಂತರ್ಪಣೆ ಸೇವೆ. ದಿನಾಂಕ 15.10.2026 ರಂದು ಕಲ್ಯಾಣ್ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದವರಿಂದ ಶಾರದ ಪೂಜೆ ಹಾಗೂ ಲಲಿತ ಸಹಸ್ರನಾಮ ಪೂಜೆ ಬಹಳ ಭಕ್ತಿಪೂರ್ವಕವಾಗಿ ಜರಗಿ ಮಹಾಆರತಿಯ ನಂತರ ಪ್ರಸಾದ ವಿತರಣೆ ನಡೆದಿತ್ತು.
ದಿನಾಂಕ 16.10.2026 ರಂದು ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾ ಗೇಟ್, ಶಹಾಡ್ ಪೂರ್ವ ಇಲ್ಲಿ ನವರಾತ್ರಿ ಸೇವೆಯ ಅಂಗವಾಗಿ ಭಜನಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಜರಗಿತು.
ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷರಾದ ನಂದೀಶ್ ಜೆ. ಪೂಜಾರಿಯವರ ನೇತೃತ್ವದಲ್ಲಿ ಯುವ ವಿಭಾಗದ ಸದಸ್ಯರು ದಿನಾಂಕ 18.10.2026 ತಂದು ಟಿಟ್ವಾಲ ದಲ್ಲಿರುವ ಪಾರಸ್ ಬಾಲ ಭವನ ಆಶ್ರಮಕ್ಕೆ ಬೇಟಿ ನೀಡಿ ಅಲ್ಲಿಯ ಮಕ್ಕಳೊಂದಿಗೆ ಸಮಯ ಕಳೆದು ಅವರಿಗೆ ಅಗತ್ಯವಿರುವ ದೈನಂದಿನ ದಿನಸಿ ಸಾಮಗ್ರಿಗಳನ್ನು ನೀಡಿ ಅಲ್ಲಿಯ ಸಂಘಟಿಕರು ಹಾಗೂ ಕಾರ್ಯಕಾರಿ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಲಾಯಿತು.
