ಷೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ 57.70 ಲಕ್ಷ ವಂಚನೆ

0
117

ಉಡುಪಿ : ಅಧಿಕ ಲಾಭದ ಆವಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 57,70,945 ರೂ. ವಂಚಿಸಿದ ಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸೆನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಿಲ್​ ಎಂಬುವವರು ಫೇಸ್​ಬುಕ್​ನಲ್ಲಿ ‘ಇಂಟರ್​ ನ್ಯಾಶನಲ್​ ರಿಬೋಟೀಂರ್ಗ್​ ಎ.ಐ ಟ್ರೆಡಿಂಗ್​’ಗೆ ಸಂಬಂಧಿಸಿದ ವಿಡಿಯೋ ಜಾಹೀರಾತನ್ನು ನೋಡಿ ಅದರಲ್ಲಿನ ಮೊಬೈಲ್​ ಸಂಖ್ಯೆಗೆ ಕರೆ ಮಾಡಿದ್ದರು.

ಈ ವೇಳೆ ವಂಚಕರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ. ಬಳಿಕ ಅವರನ್ನು ವಾಟ್ಸಾಪ್​ ಗ್ರೂಪ್​ಗೆ ಸೇರಿಸಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳ ಮಾತು ನಂಬಿದ ಅನಿಲ್​ 2025 ಡಿಸೆಂಬರ್​ನಿಂದ ೆಬ್ರವರಿ 2026ರವರೆಗೆ ವಿವಿಧ ಬ್ಯಾಂಕ್​ ಖಾತೆಗಳಿಗೆ ಒಟ್ಟು 57,70,945.60 ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ವಂಚಕರು ಮೂಲಧನ ಅಥವಾ ಲಾಭಾಂಶ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ ತಾನು ವಂಚನೆಗೆ ಒಳಗಾಗಿರುವುದು ತಿಳಿಯುತ್ತಿದ್ದಂತೆಯೇ ಅನಿಲ್​ ಪೊಲೀಸರ ಮೊರೆ ಹೋಗಿದ್ದಾರೆ.

LEAVE A REPLY

Please enter your comment!
Please enter your name here