ದಿನಾಂಕ 05-05-2026 ಮಂಗಳವಾರ ಬೆಳಿಗ್ಗೆ 8.05ಕ್ಕೆ ನೂತನವಾಗಿ ಜೀಣೋದ್ಧಾರಗೊಳಿಸಿದ ಪೆರ್ಮಾನ್ ಬರ್ಕೆ ಧರ್ಮಚಾವಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳಿಗೆ ಪುನರ್ ಪ್ರತಿಷ್ಠೆ ಮಹೋತ್ಸವ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸತ್ಯನಾರಾಯಣ ಪೂಜೆ, ಹಗಲು ಪನಿವಾರ ಪೂಜೆ ಹಾಗೂ ಮಧ್ಯಾಹ್ನ ನಡೆಯುವ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ: 04-05-2026 ಸೋಮವಾರ ಪೆರ್ಮಾನ್ ಬರ್ಕೆ ಚಾವಡಿಯಲ್ಲಿ ದೈವಗಳಿಗೆ ಬಿಂಬಾಧಿವಾಸ ಹಾಗೂ ನವೀಕರಣಗೊಳಿಸಿದ ಮನೆಯಲ್ಲಿ ವಾಸ್ತು ಪೂಜೆ, ವಾಸ್ತು ಹೋಮ, ಸುದರ್ಶನ ಹೋಮ ನಡೆಯಲಿರುವುದು ಎಂದು ಪೆರ್ಮಾನ್ ಕುಟುಂಬಸ್ಥರು ತಿಳಿಸಿರುತ್ತಾರೆ.

