ಮೂಡುಬಿದಿರೆ : ಇಲ್ಲಿನ ಅಚ್ಚರಕಟ್ಟೆ ಪಡುಮಾರ್ನಾಡು ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಇತ್ತೀಚೆಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿಬಿರದಲ್ಲಿ ಒಟ್ಟು 38 ಮಕ್ಕಳು ಪಾಲ್ಗೊಂಡಿದ್ದು ಈ ಸಂದರ್ಭದಲ್ಲಿ ಮಕ್ಕಳಿಗೆ , ಸಿರಿ ಆರ್ಟ್, ಕ್ರಿಕೆಟ್, ಬಲೂನ್ ಆಟಗಳನ್ನು ಆಡಿಸಲಾಯಿತು. ಮಧ್ಯಾಹ್ನ ಸಿಹಿ ಭೋಜನದ ನಂತರ, ಸಮಾರೋಪ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಆಡಳಿತಧಿಕಾರಿ ಡಾ.ಮಲ್ಲಿಕಾರ್ಜುನ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಶ್ ಚೌಟ ,ಅಚ್ಚರಕಟ್ಟೆ ಶಾಲೆಯ ಸ್ಥಾಪಕಾಧ್ಯಕ್ಷರೂ ಮತ್ತು ಪಡುಮಾರ್ನಾಡು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಎಂ ದಯಾನಂದ ಪೈ, ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾ ಶೆಟ್ಟಿ, ಶಿಕ್ಷಕಿ ನಾಗಶ್ರೀ, ರಾಜು ,ಗ್ರಂಥ ಪಾಲಕಿ ವನಿತಾ ಉಪಸ್ಥಿತರಿದ್ದರು. ಹಾಗೂ ಮಕ್ಕಳ ಪೋಷಕರು, ಗ್ರಾಮಸ್ಥರು ಈ ಕಾರ್ಯಕ್ರಮ ದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳೇ ನಿರ್ವಹಿಸಿದಂಥ ಈ ಸಮಾರಂಭದಲ್ಲಿ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳು ಬೇಸಿಗೆ ಶಿಬಿರದ ಅನಿಸಿಕೆ, ಗಂಡು ಮಕ್ಕಳು ಮಾದಕ ದ್ರವ್ಯ ನಿರ್ಮೂಲನೆ ಬಗ್ಗೆ ಸ್ಕಿಟ್ ಹಕ್ಕಿಯ ಹಾರಾಟ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಸ್ಕಿಟ್,ಹಾಗೂ ಕೈಗಳ ಸ್ವಚ್ಛತೆ ಯನ್ನು ನೃತ್ಯರೂಪಕದ ಮೂಲಕ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ ತುಳಸಿ ನೃತ್ಯ, ಹಾಡು, ಅಭಿನಯ ಗೀತೆ,ಫ್ಯಾಷನ್ ಶೋ ಸಂಪ್ರದಾಯ ಉಡುಗೆಗಳಲ್ಲಿ ಮಕ್ಕಳು ಮಿಂಚಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಶ್ ಚೌಟರವರು ಶಿಬಿರದ ಮಕ್ಕಳಿಗೆ ಹಾಗೂ ಭಾಗವಹಿಸಿದ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ಐಸ್ ಕ್ರೀಮ್ ಗಳನ್ನು ನೀಡಿ ಸಹಕರಿಸಿದರು. ನಂತರ ಶಿಬಿರದ ಮಕ್ಕಳಿಗೆ ಎಂ ದಯಾನಂದ ಪೈಯವರು ಪ್ರಶಂಶಾ ಪತ್ರದ ಜೊತೆ ಮಕ್ಕಳಿಗೆ ಸ್ಮರಣಿಕೆ ಚಾಕೊಲೇಟ್ ನೀಡಿ ಗೌರವಿಸಿದರು. ಹಾಗೂ ದಾನಿಗಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಪ್ರಾರಂಭದಲ್ಲಿ ಪ್ರತೀಕ್ಷಾ ಸ್ವಾಗತಿಸಿದರು. ತನ್ವಿ ಅವರು ಕಾರ್ಯಕ್ರಮ ನಿರೂಪಿಸಿದರು.ಮೋಕ್ಷ ಧನ್ಯವಾದ ಅರ್ಪಿಸಿದರು.

