ಕಾರ್ಕಳ : ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ವರ್ಷಂಪ್ರತಿ ನಡೆಯುವ ಕಾಲಾವಧಿ ರಾಶಿ ಮಾರಿ ಪೂಜೆ ಸಂಪನ್ನ

0
8

ಕಾರ್ಕಳ ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ವರ್ಷಂಪ್ರತಿ ನಡೆಯುವ ಕಾಲಾವಧಿ ರಾಶಿ ಮಾರಿ ಪೂಜೆ ಮೇ 19 ಮತ್ತು 20 ಮಂಗಳವಾರ, ಬುಧವಾರ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಬಲಿ ಉತ್ಸವ ಇತ್ಯಾದಿ ವಿವಿಧ ಸಾಂಸ್ಕೃತಿಕ ಕಾರ್ಯಗಳು ವಿಜೃಂಭಣೆಯಿಂದ ನಡೆಯಿತು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡಿ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಹಾಗೂ ಲೆಕ್ಕ ಪರಿಶೋಧಕ ಸಿ. ಏ. ಕಮಲಾಕ್ಷ ಕಾಮತ್ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿ ಯಲ್ಲಿ ಶ್ರೀ ಮಾರಿಯಮ್ಮ ದೇವಿಯ ಕಾಲಾವಧಿ ರಾಶಿ ಮಾರಿ ಪೂಜೆ ಮತ್ತು ದರ್ಶನ ಸೇವೆ ವಿಜೃಂಭಣೆಯಿಂದ ನಡೆಯಿತು.

ವಿನಯ್ ರಾಣೆ ಮಾಧ್ಯಮಕ್ಕೆ ಮಾಹಿತಿ ನೀಡಿದರು, ಮಾಜಿ ಪುರಸಭಾ ಸದಸ್ಯ ಪ್ರದೀಪ್ ರಾಣೆ, ಕುಮಾರ್ ರಾಣೆ ಮೋಹನ್ ರಾಣೆ ಮತ್ತು ಪ್ರಜ್ವಲ್ ರಾಣೆ ಆಡಳಿತ ಮೊಕ್ತೇಸರ , ಸುರೇಂದ್ರ , ಸುರೇಶ್ ಬಾಬು ,ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಅರ್ಚಕರು ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here