ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನ : ತುಳುವೇಶ್ವರ ದೇವರ ಪುನರ್ ವೈಭವೀಕರಣ ಅಷ್ಟಮಂಗಲ ಪ್ರಶ್ನೆ ಜೂ.14ಕ್ಕೆ ಮುಂದುವರಿಕೆ

0
13

ಕುಂದಾಪುರ : ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಮುಂದುವರಿದ ಭಾಗವು ಬಸ್ರೂರಿನ ತುಳುವೇಶ್ವರಿ (ಮುಳಲ) ಸಾನಿಧ್ಯದಲ್ಲಿ ಜೂ14 ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಹಾಗೂ ತುಳು ವರ್ಲ್ಡ್ ಫೌಂಡೇಷನ್ ತಿಳಿಸಿದೆ.

ಶಶಿಧರ ಮಾಂಗಡ್ ಅವರ ಸಮ್ಮುಖದಲ್ಲಿ ನಡೆದ ಪ್ರಶ್ನೆ ಚಿಂತನೆಯ ವೇಳೆ ದೊರೆತ ದೈವ ಸಂದೇಶದ ಪ್ರಕಾರ, ಶ್ರೀಚಕ್ರ ಸಾನಿಧ್ಯ ಹೊಂದಿರುವ ಮೂಲ ದೇವಿ- ತುಳುವೇಶ್ವರಿ ಸಾನಿಧ್ಯದ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ನಡೆದ ನಂತರವೇ ತುಳುವೇಶ್ವರ ದೇವರ ಪುನರ್ ವೈಭವೀಕರಣ ಕಾರ್ಯಗಳು ಪೂರ್ಣ ಫಲಪ್ರದವಾಗಲಿವೆ.

ಹೀಗಾಗಿ ತುಳುವೇಶ್ವರಿ (ಮುಳಲ) ಸಾನಿಧ್ಯದ ವಾರಸುದಾರರಾದ ಪ್ರಶಾಂತ ಪ್ರಭು ಹಾಗೂ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿ-ತಿಯಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರಾಚೀನ ತುಳುನಾಡಿನ ಶಕ್ತಿ ಸ್ವರೂಪಿಣಿಯಾದ ತುಳುವೇಶ್ವರಿ ದೇವಿಯ ಮೂಲ ಸಾನಿಧ್ಯ, ಶ್ರೀಚಕ್ರ ಆರಾಧನೆ, ಶ್ರೀಚಕ್ರ ನೇಪಾಳಕ್ಕೆ ಸ್ಥಳಾಂ-ತರವಾಗಿರುವ ಬಗ್ಗೆ, ತೀರ್ಥ ಬಾವಿ ಹಾಗೂ ಸಂಬಂಧಿತ ಇತರ ಪುರಾತನ ಕುರುಹುಗಳ ಕುರಿತು ಹೆಚ್ಚಿನ ದೈವಿಕ ಮಾರ್ಗದರ್ಶನ ಪಡೆಯುವ ಉದ್ದೇಶದಿಂದ ಈ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ.

ಈ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಚ್‌.ಕೆ. ದೇವಾನಂದ ಶೆಟ್ಟಿ, ಸಂಚಾಲಕ ಬೇಳೂರು ದಿನಕರ ಶೆಟ್ಟಿ ಹಾಗೂ ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಲಾಗಿದೆ.

LEAVE A REPLY

Please enter your comment!
Please enter your name here