ಬಕ್ರೀದ್ – ಕುರ್ಬಾನಿ  ಹೆಸರಿನಲ್ಲಿ ಅಕ್ರಮ ಗೋಸಾಗಾಟ : ಮೂಡುಬಿದಿರೆ ನೂತನ ಇನ್ಸ್ ಪೆಕ್ಟರ್ ಅವರಿಗೆ ಬಜರಂಗದಳ ಮನವಿ

0
14

ಮೂಡುಬಿದಿರೆ:ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ತಡೆಯುವಂತೆ ಪೋಲಿಸ್ ಇಲಾಖೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೂಡಬಿದ್ರಿ  ಮನವಿ ಸಲ್ಲಿಸಲಾಯಿತು.

ತಾಲೂಕಿನ ಹಲವು ಭಾಗಗಳಲ್ಲಿ ಗೋ ಕಳ್ಳ  ಸಾಗಾಟಕ್ಕೆ ಮತ್ತು ಗೋ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದು, ಆದರೂ ಗೋ ಕಳ್ಳತನಕ್ಕೆ ಕಡಿವಾಣ ಬಿದ್ದಿಲ್ಲ ಆದ್ದರಿಂದ ಮೇ 27 ರಂದು ಬಕ್ರೀದ್ ಆಚರಣೆ ನೆಪದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆ ಗೋವಿನ ಹತ್ಯೆಗೆ ನಿರ್ಬಂಧ ಹೇರಬೇಕು ಮತ್ತು ಅಕ್ರಮ ಗೋ ಸಾಗಾಟಕ್ಕೆ ಪೋಲಿಸ್ ಇಲಾಖೆ ಆಯಕಟ್ಟಿನ ಪ್ರದೇಶದಲ್ಲಿ ಚೆಕ್ ಪೋಸ್ಟ್ ನಿರ್ಮಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಮೂಡುಬಿದಿರೆ ವಲಯದ ವತಿಯಿಂದ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here