ಮುಲ್ಕಿ :”ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರ ಸಂಕಿರಣ ಸಮಾರೋಪ -ಸಾಧಕ ಮಹಿಳೆಯರಿಗೆ”ತುಳುಅಪ್ಪೆಸಿರಿ” ಪ್ರಶಸ್ತಿ ಪ್ರದಾನ

0
15

ಮುಲ್ಕಿ : ತುಳುನಾಡಿನ ಮೂಲ ಸಂಸ್ಕೃತಿ, ಆಚಾರ-ವಿಚಾರ, ದೈವ ಪರಂಪರೆ ಹಾಗೂ ತುಳು ಜೀವನ ಮೌಲ್ಯಗಳ ಸಂರಕ್ಷಣೆ ಮತ್ತು ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸದುದ್ದೇಶದಿಂದ ತುಳು ವರ್ಲ್ಡ್ ಫೌಂಡೇಶನ್, ತುಳುವ ಮಹಾಸಭೆ, ಇಂಟರ್ನ್ಯಾಷನಲ್, ಮುಲ್ಕಿ ಬಂಟರ ಸಂಘದ ನೇತೃತ್ವದಲ್ಲಿ ಮುಲ್ಕಿ ಬಿಲ್ಲವ ಸಂಘ ಮಹಿಳಾ ಮಂಡಳಿ, ರೋಟರಿ ಕ್ಲಬ್ , ಲಯನ್ ಕ್ಲಬ್ ಹಾಗೂ ವಿಜಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮ ಭಾನುವಾರ ಸಂಜೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಹಾಗೂ ತುಳು ಜಾನಪದ ವಿದ್ವಾಂಸೆ ಡಾ. ಇಂದಿರಾ ಹೆಗ್ಗಡೆ ವಹಿಸಿ ಮಾತನಾಡಿ ತುಳು ಭಾಷೆಯನ್ನು ನಮ್ಮ ಹೆಮ್ಮೆಯ ಭಾಷೆ ಎಂದು ತಿಳಿದುಕೊಂಡು ತುಳು ಸಂಸ್ಕೃತಿ ಉಳಿಸಿ ಬೆಳೆಸಿ ಎಂದು ಕಿವಿ ಮಾತು ಹೇಳಿದರು.

ಮುಖ್ಯ ಭಾಷಣಕಾರರಾಗಿ ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ ತುಳುನಾಡಿನ ಕೂಡು ಕಟ್ಟಿನ ಕುಟುಂಬ ನಶಿಸುತ್ತಿದೆ, ಕೃಷಿ ಬದುಕು ನಾಶವಾಗುತ್ತಿದೆ ತುಳು ಬದುಕು ಉಳಿಸುವ ಕಾರ್ಯ ನಡೆಸಬೇಕಾಗಿದೆ. ತುಳು ಸಂಘಟನೆಯಲ್ಲಿ ಜಾತಿ , ಜಾತಿ ಮತ ರಾಜಕೀಯ ಬೇಡ ಎಂದು ಹೇಳಿದರು.

ವೇದಿಕೆಯಲ್ಲಿ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಶೆಟ್ಟಿ, ಮುಲ್ಕಿ ಬಿಲ್ಲವರ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಪ್ರಧಾನ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಸಂಚಾಲಕ ಸುನಿಲ್ ಆಳ್ವ, ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ನಿರ್ದೇಶಕ ರಾಜೇಶ್ ಆಳ್ವ, ಬದಿಯಡ್ಕ, ತುಳುವ ಮಹಾಸಭೆ ಪ್ರಧಾನ ಸಂಚಾಲಕ ಅರವಿಂದ ಬೆಲ್ಚಡ, ಸಮಿತಿಯ ವಸಂತ್ ರೈ, ಹರಿಪ್ರಸಾದ್ ರೈ ಸರೋಜಿನಿ ಸುವರ್ಣ, ಗೀತಾ ಗಣೇಶ್ ಬಂಗೇರ, ಲತಾ ಶೇಖರ್ ಪೂಜಾರಿ, ಶೀತಲ್ ಸುಶೀಲ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸಿಂಧು ಗುಜರನ್,ಮುಲ್ಕಿ ಬಿಲ್ಲವ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ, ಜಯಂತಿ ಬಂಗೇರ, ಸಾವಿತ್ರಿ ಶೆಟ್ಟಿ, ಹಾಗೂ ಸುನಂದ ಎಂ. ಅಮೀನ್ ರವರಿಗೆ “ತುಳುಅಪ್ಪೆಸಿರಿ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾನುಮತಿ ಶೆಟ್ಟಿ ಕಕ್ವಗುತ್ತು ಸ್ವಾಗತಿಸಿದರು, ಪ್ರಮೋದ್ ಸಪ್ರೆ ಧನ್ಯವಾದ ಅರ್ಪಿಸಿದರು.

ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಐಲೇಸ ಬೆಂಗಳೂರು ತಂಡದಿಂದ ಪದ ಪಾಡ್ದನ , ಬೊಳಿಕೆ ಜಾನಪದ ಕೂಟ ತಂಡದಿಂದ ಪಾಡ್ದನ ಮೇಳ, ವಿಜಯ ಕಾಲೇಜು ಮುಲ್ಕಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ “ಅಪ್ಪೆ ಬೇರ್” ಮೂಲ ಸಂಸ್ಕೃತಿಯ ನಲಿಕೆ ಮತ್ತು ತೂಪರಿಕೆ, ಹಾಗೂ ಬಿಲ್ಲವ ಸಂಘ ಮಹಿಳಾ ಮಂಡಳಿ ಸದಸ್ಯೆಯರಿಂದ “ಬೆನ್ನಿ ಬದುಕು ‘ ನಲಿಕೆ ನಡೆಯಿತು.

LEAVE A REPLY

Please enter your comment!
Please enter your name here